Home » Government Scheme For Unmarried Women: ಮಹಿಳೆಯರೇ, ನಿಮಗೆ 21 ವರ್ಷ ಆಗಿದ್ರೆ ಈ ಯೋಜನೆಯಿಂದ ಪ್ರತೀ ತಿಂಗಳು ಸಿಗಲಿದೆ 3 ಸಾವಿರ ರೂ.! ಅರ್ಜಿ ಸಲ್ಲಿಕೆಗೆ ಮುಗಿಬಿದ್ದರು ನಾರಿಯರು

Government Scheme For Unmarried Women: ಮಹಿಳೆಯರೇ, ನಿಮಗೆ 21 ವರ್ಷ ಆಗಿದ್ರೆ ಈ ಯೋಜನೆಯಿಂದ ಪ್ರತೀ ತಿಂಗಳು ಸಿಗಲಿದೆ 3 ಸಾವಿರ ರೂ.! ಅರ್ಜಿ ಸಲ್ಲಿಕೆಗೆ ಮುಗಿಬಿದ್ದರು ನಾರಿಯರು

1 comment
Government Scheme

Government Scheme For Unmarried Women: ಮಹಿಳೆಯರಿಗೆ (Women)ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ, 21 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗಾಗಿ(Government scheme for unmarried women)ಯೋಜನೆಯೊಂದನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.

ಮಹಿಳೆಯರಿಗಾಗಿ ಮಧ್ಯಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲಾಗುವ ಕುರಿತು ಸ್ವತಃ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಹೊಸ ಹಲವು ಯೋಜನೆಗಳನ್ನು ಶಿವರಾಜ್ ಸರ್ಕಾರ ನೀಡುತ್ತಾ ಬಂದಿದೆ.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 21 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ (government scheme for unmarried women)ಲಾಡ್ಲಿ ಬೆಹ್ನಾ ಯೋಜನೆಯಡಿ ಪ್ರಯೋಜನಗಳನ್ನು ನೀಡಲು ಮುಂದಾಗಿದ್ದಾರೆ.ಈ ಯೋಜನೆಯಿಂದ ಸುಮಾರು 1.32 ಕೋಟಿ ಮಹಿಳೆಯರು ಅನುಕೂಲ ಪಡೆಯಲಿರುವ ಕುರಿತು ಚೌಹಾಣ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಡಿ 21 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಮಾಸಿಕ 1,250 ರೂ. ದೊರೆಯಲಿದ್ದು, ಈ ಸಹಾಯಧನವನ್ನು ಹಂತ ಹಂತವಾಗಿ ಮಾಸಿಕ 3000 ರೂ.ಗೆ ಏರಿಕೆ ಮಾಡಲಾಗುವ ಕುರಿತು ಮುಖ್ಯಮಂತ್ರಿ ಘೋಷಿಸಿದ್ದಾರೆ. ಮಹಿಳೆಯರಿಗಾಗಿ ನಾರಿ ಶಕ್ತಿ ವಂದನ್ ಕಾಯ್ದೆ (ಮಹಿಳಾ ಮೀಸಲಾತಿ ಮಸೂದೆ)ಯನ್ನು ಮೋದಿ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಿದೆ. ಹೀಗಾಗಿ, ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ.33 ಮೀಸಲಾತಿ ಸಿಗಲಿದೆ.

ಇದನ್ನೂ ಓದಿ: ಅಮಿತ್ ಶಾ ಜೊತೆ ‘ಕಾವೇರಿ’ ಕುರಿತು ಕುಮಾರಸ್ವಾಮಿ ಚರ್ಚೆ ?! ಡಿಕೆಶಿ ಕೊಟ್ರು ನೋಡಿ ಸಖತ್ ಟಾಂಗ್

You may also like

Leave a Comment