SBI Card : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅನೇಕ ಹಣಕಾಸು ಸೇವೆಗಳನ್ನು ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಒದಗಿಸುತ್ತಿದ್ದು, ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿದೆ. ಇದೀಗ SBI ಅಂಗಸಂಸ್ಥೆಯಾದ ಎಸ್‌ಬಿಐ ಕಾರ್ಡ್ ( SBI Card)ಇತ್ತೀಚೆಗೆ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ.
ಇನ್ನು ಮುಂದೆ SBI ಕಾರ್ಡ್‌ಗಳು ಮತ್ತು ಪಾವತಿ ಸೇವೆಗಳ ಕಂಪನಿಯು ಕ್ಯಾಶ್‌ಬ್ಯಾಕ್ SBI ಕಾರ್ಡ್‌ನಲ್ಲಿನ ಸೇವೆಗಳನ್ನ ಪರಿಷ್ಕರಿಸಿದ್ದು, ಕೆಲವು ಸೇವೆಗಳನ್ನು ಹಿಂಪಡೆಯಲಾಗಿದೆ. ಇದರರ್ಥ ಅನೇಕ ವಹಿವಾಟುಗಳ ಮೇಲೆ ಕ್ಯಾಶ್‌ಬ್ಯಾಕ್ ಇರುವುದಿಲ್ಲ. ಈ ಬದಲಾವಣೆ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.
ಮುಖ್ಯವಾಗಿ ಗಿಫ್ಟ್ ಕಾರ್ಡ್‌ಗಳು (Gift card ) , ನಾವೆಲ್ಟಿ ಶಾಪ್‌ಗಳು, ಆಭರಣ, ಶಾಲೆ, ಶೈಕ್ಷಣಿಕ ಸೇವೆಗಳು, ಯುಟಿಲಿಟೀಸ್, ವಿಮಾ ಸೇವಾ ಕಾರ್ಡ್‌ಗಳು, ರೈಲ್ವೆ, ಕ್ವಾಸಿ ಕ್ಯಾಶ್ ಇತ್ಯಾದಿಗಳ ಮೇಲೆ ಕ್ಯಾಶ್‌ಬ್ಯಾಕ್, ಎಸ್‌ಬಿಐ ಕಾರ್ಡ್‌ನಲ್ಲಿ ಯಾವುದೇ ಕ್ಯಾಶ್ಬ್ಯಾಕ್ ಲಭ್ಯವಿಲ್ಲ ಎಂದು ತಿಳಿದುಬಂದಿದೆ.
ಜೊತೆಗೆ ಎಸ್‌ಬಿಐ ಮತ್ತೊಂದು ಶಾಕ್ ನೀಡಿದ್ದು, ಗರಿಷ್ಠ ರೂ. 5 ಸಾವಿರದವರೆಗೆ ಮಾತ್ರ ಕ್ಯಾಶ್ಬ್ಯಾಕ್ ಪಡೆಯಬಹುದು ಎಂದು ತಿಳಿಸಿದೆ.
ಇನ್ನು ಎಸ್‌ಬಿಐ ಕಾರ್ಡ್ 42 ಲಾಂಜ್‌ಗಳು ಮತ್ತು 21 ವಿಮಾನ ನಿಲ್ದಾಣಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಜೊತೆಗೆ ಕ್ಯಾಶ್‌ಬ್ಯಾಕ್ SBI ಕಾರ್ಡ್‌ನಲ್ಲಿ ದೇಶೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶವನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಎಸ್‌ಬಿಐ ಕಾರ್ಡ್ ಕಳೆದ ತಿಂಗಳು ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಶುಲ್ಕವನ್ನ ಪರಿಷ್ಕರಿಸಿದ್ದು, ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸಿದರೆ, ಈಗ ರೂ. 199 ಪಾವತಿಸಬೇಕು. ಇದುವರೆಗೆ ಈ ಶುಲ್ಕ 99 ರೂಪಾಯಿ ಮಾತ್ರ ನಿಗದಿಸಲಾಗಿತ್ತು.
ಹೆಚ್ಚುವರಿಯಾಗಿ, ಎಸ್‌ಬಿಐ ಕಳೆದ ವರ್ಷ ನವೆಂಬರ್‌ನಲ್ಲಿ ಎರಡನೇ ಪಾವತಿಗಳ ಸಂಸ್ಕರಣಾ ಶುಲ್ಕವನ್ನು 99ಕ್ಕೆ ಏರಿಕೆಯಾಗಿದೆ. ಇದು 18 ಪ್ರತಿಶತ GST ತೆಗೆದುಕೊಳ್ಳುತ್ತದೆ. ಇದರಿಂದ ಗ್ರಾಹಕರ ಹೊರೆ ಹೆಚ್ಚಿದೆ ಎನ್ನಬಹುದು.
ಒಟ್ಟಿನಲ್ಲಿ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐಗಿಂತ ಎಸ್‌ಬಿಐ ಹೆಚ್ಚಿನ ಬೆಳವಣಿಗೆ ಹೊಂದುತ್ತಿದ್ದು, ಎಸ್‌ಬಿಐ ಕಾರ್ಡ್ ತಿಂಗಳಿಗೆ ಶೇಕಡಾ 2ರಷ್ಟು ಹೆಚ್ಚಿದ್ದರೆ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಕ್ರಮವಾಗಿ ಶೇಕಡಾ 0.6 ಮತ್ತು ಶೇಕಡಾ 0.4ರಷ್ಟು ಹೆಚ್ಚಾಗಿದೆ.
ಅಂದರೆ ಆರ್‌ಬಿಐ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಎಸ್‌ಬಿಐ ಕಾರ್ಡ್‌ಗೆ 3 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದು, ಅಂದರೆ ಕಂಪನಿಯು 3 ಲಕ್ಷ ಹೊಸ ಕಾರ್ಡ್‌ಗಳನ್ನ ನೀಡಿದೆ. ಎಚ್‌ಡಿಎಫ್‌ಸಿ ಕಾರ್ಡ್‌ಗಳ ವಿತರಣೆಯು 60 ಸಾವಿರ ಮತ್ತು ಐಸಿಐಸಿಐ ಕಾರ್ಡ್‌ಗಳ ವಿತರಣೆಯು 80 ಸಾವಿರವಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿದಾಗ ಪ್ರಸ್ತುತ ಎಸ್‌ಬಿಐ ಶುಲ್ಕವನ್ನ ಹೆಚ್ಚಿಸುತ್ತಿದ್ದರೂ, ಹೊಸ ಕಾರ್ಡ್‌ಗಳ ವಿತರಣೆಯಲ್ಲಿ ಎಸ್‌ಬಿಐ ಅಗ್ರಸ್ಥಾನದಲ್ಲಿದೆ. ಕಳೆದ ವಾರ RBI ಬಿಡುಗಡೆ ಮಾಡಿದ ಅಂಕಿಅಂಶಗಳು ಇದನ್ನ ಬಹಿರಂಗಪಡಿಸಿದೆ.
