Home » Chamarajanagar: ಕರಿಮಣಿ ಮಾಲಿಕ ನೀನಲ್ಲ ಎಂದು ರೀಲ್ಸ್ ಮಾಡಿದ ಹೆಂಡತಿ- ನೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ !!

Chamarajanagar: ಕರಿಮಣಿ ಮಾಲಿಕ ನೀನಲ್ಲ ಎಂದು ರೀಲ್ಸ್ ಮಾಡಿದ ಹೆಂಡತಿ- ನೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ !!

1 comment
Chamarajanagar

Chamaraja nagar: ಇನ್‌ಸ್ಟಾಗ್ರಾಮ್, ಫೇಸ್ ಬುಕ್, ಯೂಟ್ಯೂಬ್ ಹೀಗೆ ಯಾವುದೇ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೂ ಪ್ಲೇ ಆಗೋ ಸಾಂಗ್, ರೀಲ್ಸ್ ಅಂದ್ರೆ ಕರಿಮಣಿ ಮಾಲಿಕ ನೀನಲ್ಲ… ಅನ್ನೋ ಹಳೆಯದಾದ್ರೂ ಟ್ರೆಂಡಿ ಆಗಿರೋ ಸಾಂಗ್. ಆರಂಭದಲ್ಲಿ ಖುಷಿ ಆದ್ರೂ ಈಗಂತೂ ಎಲ್ಲರಿಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ. ಅಂದಹಾಗೆ ರೀಲ್ಸ್, ಡ್ಯಾನ್ಸ್ ಮಾಡದವರು ಕೂಡ ಇದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೆಲವರಂತೂ ತನ್ನ ಗಂಡನನ್ನೇ ನಿಲ್ಲಿಸಿಕೊಂಡು ‘ಕರಿಮಣಿಮಾಲಿಕ ನೀನಲ್ಲ’ ಎಂದು ಸ್ಟೆಪ್ ಹಾಕಿದ್ದಾರೆ. ಅಂತೆಯೇ ಇಲ್ಲೊಬ್ಬಳು ಮಹಿಳೆ ಹೀಗೆ ಮಾಡಿದ್ದಾಳೆ. ಆದರೆ ಈ ರೀಲ್ಸ್ ಆಕೆಯ ಮಾಂಗಲ್ಯಭಾಗ್ಯವನ್ನೇ ಕಿತ್ತುಕೊಂಡಿದೆ.

https://www.instagram.com/reel/C3XsVCHC7qA/?igsh=NGZ4NngyMTUzZHZk

ಇದನ್ನೂ ಓದಿ: Farmers protest: ಮೋದಿ ಜನಪ್ರಿಯತೆ ಗಗನಕ್ಕೇರಿದೆ, ಅದನ್ನು ಕಡಿಮೆ ಮಾಡಲೆಂದೇ ದೆಹಲಿ ಪ್ರತಿಭಟನೆ – ರೈತ ನಾಯಕನ ಅಘಾತಕಾರಿ ವಿಡಿಯೋ ವೈರಲ್!!

ಹೌದು, ಇದಂತೂ ದುರಂತದ ವಿಚಾರ. ಕರಿಮಣಿ ಮಾಲೀಕ ನೀನಲ್ಲ ಸಾಂಗ್‌ಗೆ ಚಾಮರಾಜನಗರ(Chamarajnagar) ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಒಂದು ಬಲಿಯಾಗಿದೆ. ಪತ್ನಿಯ ರೀಲ್ಸ್‌ ಕಂಡು ಪತಿ ಸೂಸೈಡ್‌ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪಿ.ಜಿ‌.ಪಾಳ್ಯ ಗ್ರಾಮದ 33 ವರ್ಷದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಕುಮಾರ್‌ ಅವರ ಪರಿ ರೂಪಾ, ತನ್ನ ಸೋದರ ಮಾವ ಹಾಗೂ ಸಹೋದರಿಯ ಜೊತೆ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್‌ ಮಾಡಿ ಪೋಸ್ಟ್‌ ಮಾಡಿದ್ದರು. ರೂಪಾ ಅವರ ರೀಲ್ಸ್‌ಅನ್ನು ನೋಡಿ ಕುಮಾರ್‌ ಅವರ ಗೆಳೆಯರು ಆತನನ್ನು ರೇಗಿಸಿದ್ದರು. ಅದಲ್ಲದೆ, ಅವರ ಕುಟುಂಬಸ್ಥರು ಕೂಡ ಇದೇ ವಿಚಾರವಾಗಿ ಆತನ ಕಾಲೆಳೆದಿದ್ದರು. ಹೀಗಾಗಿ ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಮನನೊಂದಿದ್ದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment