Home » ಚಂದ್ರಯಾನ 3 ಮಿಷನ್ ಕಂಪ್ಲೀಟ್, ಶತಕೋಟಿ ಭಾರತೀಯರ ಕನಸು ನನಸು !

ಚಂದ್ರಯಾನ 3 ಮಿಷನ್ ಕಂಪ್ಲೀಟ್, ಶತಕೋಟಿ ಭಾರತೀಯರ ಕನಸು ನನಸು !

0 comments

Chandrayaan-3: ಭಾರತದಿಂದ ಕನಸುಗಳನ್ನು ವಿಜ್ಞಾನವನ್ನು ಮತ್ತು ಹಾರೈಕೆಗಳನ್ನು ಹೊತ್ತು ಸಾಗಿದೆ. ಚಂದ್ರಯಾನ ಮೂರು, ಮಿಷನ್ ಸಕ್ಸಸ್ ಫುಲ್ ಆಗಿದೆ. ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡರ್ ಭೂಸ್ಪರ್ಶ ಮಾಡಿದೆ. ಅಂತರಿಕ್ಷ ಯಾನದಲ್ಲಿ ಮತ್ತು ಚಂದ್ರಯಾನದಲ್ಲಿ ಭಾರತದ ಹೆಸರಿನಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಿದ್ದು, ಭಾರತದ ಮಾನವ ಸಹಿತ ಚಂದ್ರಯಾನದ ಕನಸಿಗೆ ರೆಕ್ಕೆ ಪುಕ್ಕಗಳು ಮೂಡಿವೆ.

ಆಗಸ್ಟ್ 14 ರಂದು ಭಾರತದ ಶ್ರೀಹರಿ ಕೋಟಾದಿಂದ ಹೊರಟ ಚಂದ್ರಯಾನ 3 ಇದೀಗ ಚಂದ್ರನ ಅಂಗಳಕ್ಕೆ ತಲುಪಿ ಆಗಿದೆ. ಸುಮಾರು 5.40 ರಿಂದ ಯಾವುದೇ ಸಿನಿಮಾದ ಕ್ಲೈಮಾಕ್ಸ್ ಗೂ ಕಮ್ಮಿ ಇಲ್ಲದಂತೆ ಶುರುವಾದ ವೀಕ್ಷಣೆ ನಡೆದು, ಕೊನೆಗೂ ಲ್ಯಾಂಡರ್ ಚಂದ್ರನ ಮಣ್ಣಿನ ಮೇಲೆ ಅಡಿ ಇಡುವುದರೊಂದಿಗೆ ಚಂದ್ರಯಾನ 3 ಮಿಷನ್ ಸಕ್ಸಸ್ ಆಗಿದೆ. ಭಾರತದ ಮೇಲಿದ್ದ ಇಷ್ಟು ದೊಡ್ಡ ಪ್ರಮಾಣದ ನಿರೀಕ್ಷೆಯನ್ನು ನಿಜ ಮಾಡಿದ ಹೆಗ್ಗಳಿಕೆ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ನಿಜ ಮಾಡಿದೆ.

ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದ್ದು, ಇದೀಗ ಚಂದ್ರಯಾನ ನೌಕೆಯು ಚಂದ್ರನ ಅಂಗಳಕ್ಕೆ ತಲುಪುವಲ್ಲಿಯೂ ಯಶಸ್ವಿಯಾಗಿದೆ. ಇಸ್ರೋ (ISRO) ಆಗಸ್ಟ್ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ ಎಂದು ಹೇಳಿತ್ತು. ಸುಧೀರ್ಘ 40ದಿನಗಳ ಪ್ರಯಾಣದ ನಂತರ ಇದೀಗ ಚಂದ್ರಯಾನ ನೌಕೆ ಚಂದ್ರನಲ್ಲಿ ತಲುಪಿದ್ದು, ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜು.14ರ ಶುಕ್ರವಾರ ಚಂದ್ರಯಾನ-3 ನೌಕೆಯು ಸುಧೀರ್ಘ ಪ್ರಯಾಣಕ್ಕೆ ಹೊರಟಿತ್ತು. ಇದೀಗ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನಡೆದಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದಿದೆ. 5.20 ಕ್ಕೆ ಓಪನ್‌ ಆಗಿದ್ದು, 6.20 ಕ್ಕೆ ವೀಕ್ಷಣೆಗೆ ದೊರಕಿದೆ.

ಈ ಮೂಲಕ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದ್ದು, ಇದು ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದೆ. ಚಂದ್ರನ (Moon) ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಭಾರತ (India) ಆಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ದೇಶ ಭಾರತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: Aadhaar: UIDAI ನಿಂದ ಬಿಗ್‌ ಮಾಹಿತಿ! ಮೋಸ ಹೋಗದಿರಿ ಸಾರ್ವಜನಿಕರೇ, ಆಧಾರ್‌ ಮಾಹಿತಿಯನ್ನು ಇಲ್ಲಿ ಶೇರ್‌ ಮಾಡಬೇಡಿ!

You may also like

Leave a Comment