Home » Chandrayana -3: ಚಂದ್ರನಲ್ಲಿರೋ ಭಾರತದ ವಿಕ್ರಮ್ ಲ್ಯಾಂಡರ್ ಬಳಿಗೆ ಬಂದ ಅಮೇರಿಕಾದ ಉಪಗ್ರಹ ಮಾಡಿದ್ದೇನು ಗೊತ್ತಾ? ವೈರಲ್ ಆಯ್ತು ಅಚ್ಚರಿಯ ಫೋಟೋ !!

Chandrayana -3: ಚಂದ್ರನಲ್ಲಿರೋ ಭಾರತದ ವಿಕ್ರಮ್ ಲ್ಯಾಂಡರ್ ಬಳಿಗೆ ಬಂದ ಅಮೇರಿಕಾದ ಉಪಗ್ರಹ ಮಾಡಿದ್ದೇನು ಗೊತ್ತಾ? ವೈರಲ್ ಆಯ್ತು ಅಚ್ಚರಿಯ ಫೋಟೋ !!

4 comments

Chandrayana-3: ಭಾರತ ಏಕ ಕಾಲಕ್ಕೇ ಎರಡೆರಡು ಸಾಧನೆ ಮಾಡಿ ಇಡೀ ವಿಶ್ವದ ಗಮನವನ್ನು ಸೆಳೆದಿದೆ. ಪ್ರಥಮಥವಾಗಿ ಚಂದ್ರನ ಅಂಗಳದ ದಕ್ಷಿಣ ದೃವದಲ್ಲಿ ಹೆಜ್ಜೆ ಇರಿಸಿದರೆ ಇದಾದ ಕೆಲವೇ ದಿನಗಳಲ್ಲಿ ಸೂರ್ಯನನ್ನು ಬೆನ್ನಟ್ಟಿದೆ. ಇನ್ನೂ ಚಂದ್ರನ ಅಂಗಳದಲ್ಲಿರೋ ಭಾರತದ ವಿಕ್ರಮ್ ಲ್ಯಾಂಡರ್(Vikram lander) ಹಾಗೂ ಪ್ರಗ್ಯಾನ್ ರೋವರ್(Pragyan rover) ಚಂದ್ರನ ಕುರಿತು ಶೋಧನೆ ನಡೆಸಿ ಮಾಹಿತಿಗಳೊಂದಿಗೆ ಸುಂದರ ವಿಡಿಯೋ, ಫೋಟೋಗಳನ್ನು ಕಳಿಸುತ್ತಾ ಇದೀಗ ಸ್ಲೀಪ್ ಮೂಡ್ ಗೆ ಜಾರಿವೆ. ಆದರೀಗ ಇವುಗಳು ಚಂದ್ರನಂಗಳದಲ್ಲಿರುವ ಫೋಟೋಗಳನ್ನು ಅಮೇರಿಕಾ(America) ಬಿಡುಗಡೆ ಮಾಡಿದೆ.

ಹೌದು, ಚಂದ್ರನ ದಕ್ಷಿಣ ಧ್ರುವದಲ್ಲಿ ಪವಡಿಸುತ್ತಿರುವ ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್‌ನ ವಿಶೇಷ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಹಂಚಿಕೊಂಡಿದೆ. ಈ ಚಿತ್ರವನ್ನು ನಾಸಾದ ಲೂನಾರ್ ರಿಕನೈಸಾನ್ಸ್ ಆರ್ಬಿಟರ್ (ಎಲ್‌ಆರ್‌ಒ) ಬಾಹ್ಯಾಕಾಶ ನೌಕೆ ಸೆರೆಹಿಡಿದಿದ್ದು ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಅಂದಹಾಗೆ ISRO ಕೂಡ ಭಾರತೀಯರಿಗೆ ಪ್ರಾಜೆಕ್ಟ್ ನ ಮಾಹಿತಿಗಳನ್ನು ತಿಳಿಸುವ ಸಲುವಾಗಿ ಪ್ರತಿದಿನ ಫೋಟೋ ಜೊತೆಗೆ ಅವುಗಳ ಕಾರ್ಯವೈಖರಿಯ ಮಾಹಿತಿಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿಕೊಳ್ಳುತ್ತಿರುವುದು ಪ್ರತಿಯೊಬ್ಬರಿಗೂ ಕೂಡ ಏನೆಲ್ಲಾ ಆಗುತ್ತಿದೆ ಎನ್ನುವಂತಹ ಸುಲಭ ರೂಪದ ಮಾಹಿತಿ ಕೂಡ ಸಿಗುವುದಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಸೆಪ್ಟೆಂಬರ್ 6 ರಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಆಗಿರುವಂತಹ NASA ಚಂದ್ರನ ಮೇಲೆ ಲ್ಯಾಂಡ್ ಆಗಿರುವಂತಹ ಇಸ್ರೋದ ಉಪಗ್ರಹದ ಲ್ಯಾಂಡಿಂಗ್ ಪಾಯಿಂಟ್ ಫೋಟೋವನ್ನು ಕೂಡ ತೆಗೆದಿರುವುದು ಈಗ ಸೋಶಿಯಲ್ ಮೀಡಿಯಾ (Social Media)ದಲ್ಲಿ ವೈರಲ್ ಆಗುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ನಾಸಾ “ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ- 3ರ ಚಿತ್ರವನ್ನು ನಾಸಾದ ಎಲ್‌ಆರ್‌ಒ ಬಾಹ್ಯಾಕಾಶ ನೌಕೆ ಇತ್ತೀಚೆಗೆ ಸೆರೆಹಿಡಿದಿದೆ. ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿಮೀ ದೂರದಲ್ಲಿ ಇಸ್ರೋದ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಆಗಸ್ಟ್ 23ರಂದು ಚಂದ್ರಯಾನ- 3 ನೌಕೆ ಇಳಿದಿತ್ತು” ಎಂದು ಹೇಳಿದೆ.

ನಾಸಾ ಪ್ರಕಾರ, ಎಲ್‌ಆರ್‌ಒ ಕ್ಯಾಮೆರಾವು ಲ್ಯಾಂಡರ್ ನೆಲ ಸ್ಪರ್ಶಿಸಿದ ನಾಲ್ಕು ದಿನಗಳ ಬಳಿಕ ಓರೆ ಕೋನದಿಂದ (42 ಡಿಗ್ರಿಯಷ್ಟು ಬಾಗಿದ ಕೋನ) ಫೋಟೋ ಕ್ಲಿಕ್ಕಿಸಿದೆ. ಲ್ಯಾಂಡರ್ ಸುತ್ತಲೂ ಕಾಣುವ ಪ್ರಕಾಶಮಾನ ಭಾಗವು ರಾಕೆಟ್ ಹೊಗೆಯು ಚಂದ್ರನ ನೆಲದಿಂದ ಸಣ್ಣ ಕಣಗಳನ್ನು ಎಬ್ಬಿಸುವುದರಿಂದ ಉಂಟಾಗಿದೆ.

ಇನ್ನು ಚಂದ್ರನ ಮೇಲೆ ಇಳಿದ ನಂತರ ಪ್ರಗ್ಯಾನ್ ರೋವರ್ ಲೂನಾರ್ ಸರ್ಫೇಸ್ ಮೇಲೆ ಸಲ್ಫರ್ ನ ಅಸ್ತಿತ್ವವನ್ನು ಪರಿಶೀಲಿಸುವುದು ವಾತಾವರಣದ ಟೆಂಪರೇಚರ್ ಸೇರಿದಂತೆ ಸಾಕಷ್ಟು ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡಿದೆ ಇತ್ತೀಚಿಗಷ್ಟೇ ಸೂರ್ಯನ ಸಂಶೋಧನೆಗಾಗಿ Adithya L1 ಉಪಗ್ರಹದ ಉಡಾವಣೆಯನ್ನು ಕೂಡ ಯಶಸ್ವಿಯಾಗಿ ಮಾಡಿದೆ.

You may also like

Leave a Comment