Home » ಚೆನ್ನಾವರ : ಜೀರ್ಣೋದ್ಧಾರಗೊಳ್ಳುತ್ತಿರುವ ದೈವಸ್ಥಾನಕ್ಕೆ ಸಚಿವ ಎಸ್.ಅಂಗಾರ ಭೇಟಿ

ಚೆನ್ನಾವರ : ಜೀರ್ಣೋದ್ಧಾರಗೊಳ್ಳುತ್ತಿರುವ ದೈವಸ್ಥಾನಕ್ಕೆ ಸಚಿವ ಎಸ್.ಅಂಗಾರ ಭೇಟಿ

by Praveen Chennavara
0 comments

ಶ್ರದ್ದಾಕೇಂದ್ರದ ಜೀರ್ಣೋದ್ದಾರದಿಂದ ಊರಿಗೆ ಶ್ರೇಯಸ್ಸು-ಎಸ್.ಅಂಗಾರ

ಸವಣೂರು:ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರದಿಂದ ಊರಿಗೆ ಶ್ರೇಯಸ್ಕರ ಎಂದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌ ಅಂಗಾರ ಹೇಳಿದರು.

ಅವರು ಜೀರ್ಣೋದ್ದಾರಗೊಳ್ಳುತ್ತಿರುವ ಪಾಲ್ತಾಡಿ ಗ್ರಾಮದ ಚೆನ್ನಾವರ ಉಳ್ಳಾಕುಲು ,ಅಬ್ಬೆಜಲಾಯ,ಸಪರಿವಾರ ದೈವಗಳ ದೈವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

ದೈವಸ್ಥಾನದ ಅಭಿವೃದ್ದಿಗೆ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು ಎಂದರು.

ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಾಯ ಗೌಡ ಅವರು ಸಚಿವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಮೋನಪ್ಪ ಗೌಡ,ಪುಟ್ಟಣ್ಣ ಸಿ.ಎಂ.ಅಂಕತ್ತಡ್ಕ, ಪ್ರಧಾನ‌ ಕಾರ್ಯದರ್ಶಿ ದೀಕ್ಷಿತ್ ಜೈನ್,ಜತೆ ಕಾರ್ಯದರ್ಶಿಗಳಾದ ನಂದ ಕುಮಾರ್ ಸಿ.ಜೆ,ಕೃಷ್ಣಪ್ಪ ಚೆನ್ನಾವರ, ಸ್ವಾಗತ ಸಮಿತಿ ಸಂವಾಲಕ ಬಾಲಕೃಷ್ಣ ರೈ ಚೆನ್ನಾವರ, ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಅಭಿಷೇಕ್ ರೈ ,ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ್ ರೈ,ಜೀರ್ಣೋದ್ದಾರ ಸಮಿತಿ ಸದಸ್ಯರಾದ ದೇವಪ್ಪ ಸಿ,ಪ್ರವೀಣ್ ಕುಮಾರ್,ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಅಭಿಷೇಕ್ ರೈ ಪಟ್ಟೆ ,ಗಂಗಾಧರ ಬೇರಿಕೆ,ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ್ ರೈ ನೆಲ್ಯಾಜೆ,ಸದಸ್ಯರಾದ ಗಂಗಾಧರ ಬೇರಿಕೆ, ನಿತೇಶ್ ಮಡಿವಾಳ, ರೇವತಿ ಎ,ಸುಧಾ ಜಾಣಮೂಲೆ,ಮಹಾವೀರ ಶೆಟ್ಟಿ, ಮಂದಾರ ಶೆಟ್ಟಿ, ಗೀತಾ,ಜಗದೀಶ್,ಸುನೀಲ್, ಭರತ್,ಉಮೇಶ್ ‌ಮೊದಲಾದವರಿದ್ದರು.

You may also like

Leave a Comment