Home » Chhattisgarh accident: ಟ್ರಕ್​ ಹಾಗೂ ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ! 6 ಮಂದಿ ಸಾವು, 25 ಜನರಿಗೆ ಗಾಯ

Chhattisgarh accident: ಟ್ರಕ್​ ಹಾಗೂ ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ! 6 ಮಂದಿ ಸಾವು, 25 ಜನರಿಗೆ ಗಾಯ

by Mallika
0 comments
Chhattisgarh accident

Chhattisgarh accident: ಪಿಕಪ್‌ವ್ಯಾನ್‌ ಮತ್ತು ಟ್ರಕ್‌ ಮಧ್ಯೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 6ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಛತ್ತೀಸ್‌ಗಢದಲ್ಲಿ (Chhattisgarh accident) ನಡೆದಿದೆ. ಈ ಅಪಘಾತದಲ್ಲಿ ಮಗುವೊಂದು ಸೇರಿದಂತೆ ಆರುಮಂದಿ ಮೃತರಾಗಿದ್ದಾರೆ. ಈ ಭೀಕರ ಅಪಘಾತ ಬಲೋದಬಜಾರ್‌ ರಾಷ್ಟ್ರೀಯ ಹೆದ್ದಾರಿಯ ಗೋದಾ ಪುಲಿಯಾ ಪ್ರದೇಶದಲ್ಲಿ ನಡೆದಿದೆ.

ಪಿಕಪ್‌ವ್ಯಾನ್‌ನಲ್ಲಿ ಸುಮಾರು 30ಮಂದಿ ಪ್ರಯಾಣಿಕರಿದ್ದು, ಇದರಲ್ಲಿ ಐವರು ಮಹಿಳೆಯರು ಸೇರಿದಂತೆ ಒಂದು ಮಗು ಮೃತರಾಗಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಾಗೂ ಗಾಯಾಳುಗಳನ್ನು ಬಲೋದಬಜಾರ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಲಾರಿ ಪೊಲೀಸ್‌ ಠಾಣೆಯ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಏಳು ಮಂದಿ ಸಾವು!!

You may also like

Leave a Comment