Home » Chikka Tirupati: ತಿರುಪತಿ ಯಾತ್ರಿಕರೇ ಗಮನಿಸಿ- ಕೇವಲ 100 ರೂಗೆ ಸಿಗಲಿದೆ ನಿಮಗೆ ತಿಮ್ಮಪ್ಪನ ವಿಶೇಷ ದರ್ಶನ !! ಈಗಲೇ ಬುಕ್ ಮಾಡಿ

Chikka Tirupati: ತಿರುಪತಿ ಯಾತ್ರಿಕರೇ ಗಮನಿಸಿ- ಕೇವಲ 100 ರೂಗೆ ಸಿಗಲಿದೆ ನಿಮಗೆ ತಿಮ್ಮಪ್ಪನ ವಿಶೇಷ ದರ್ಶನ !! ಈಗಲೇ ಬುಕ್ ಮಾಡಿ

0 comments

Chikka Tirupati: ಶ್ರಾವಣ ಮಾಸದ ಕೊನೆಯ ಶನಿವಾರವಾಗಿರುವ ಹಿನ್ನೆಲೆ, ಕೋಲಾರದಲ್ಲಿ ಚಿಕ್ಕ ತಿರುಪತಿ(Chikka Tirupati) ದೇವರ ದರ್ಶನ ಪಡೆಯಲು ಭಕ್ತರು ಸಾಗರೋಪಾದಿಯಲ್ಲಿ ಸೇರುತ್ತಾರೆ.

ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಬೇಡಿದ ವರವನ್ನು ಕರುಣಿಸುವ ದೇವರೆಂದೇ ಪ್ರಸಿದ್ದಿ ಪಡೆದಿದೆ. ಬೆಳಗ್ಗೆ 4 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು, ದೇಗುಲ ದರ್ಶನಕ್ಕೆ 30 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ತಿಮ್ಮಪ್ಪನ ವಿಶೇಷ ದರ್ಶನಕ್ಕೆ 100 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ವೆಂಕಟೇಶ್ವರನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಇಂದು ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಧರ್ಮ ದರ್ಶನದ ಕ್ಯೂನಲ್ಲಿ ದೇವರ ದರ್ಶನಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಲಿದ್ದು, ಹೀಗಾಗಿ, ತಿಮ್ಮಪ್ಪನ ದರ್ಶನಕ್ಕೆ 100ರೂಪಾಯಿ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ.

You may also like

Leave a Comment