
Chikkaballapura: ಪ್ರೀತಿಸಿ ಮದುವೆಯಾದ (Marriage) ಗಂಡನೇ 19 ವರ್ಷದ ನವ್ಯಾಳನ್ನ ಬರ್ಬರವಾಗಿ ಕೊಲೆಗೈದಿದ್ದಾನೆ (Murder) ಎನ್ನಲಾಗ್ತಿದೆ.

ನಿತ್ಯ ಕುಡಿದು ಮನೆಗೆ ಬರ್ತಿದ್ದ ಸತೀಶನ ಬಳಿ ನವ್ಯಾ ಕೇಳಿದ್ದು ಒಂದೇ ಪ್ರಶ್ನೆಯಂತೆ. ಈ ಒಂದು ಪ್ರಶ್ನೆ ಆಕೆಯ ಜೀವನ್ನೇ ತೆಗೆದಿದೆ. ಏನದು?
ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಗ್ರಾಮದಲ್ಲಿ, ನವ್ಯಾ ಪತಿ ಸತೀಶ್ ಕುಮಾರ್ ಕುಡಿದ ಚಟಕ್ಕೆ ಬಿದ್ದಿದ್ದ ನಿತ್ಯ ಕುಡಿದು ಮನೆಗೆ ಬರ್ತಿದ್ದ. ಕಳೆದ ರಾತ್ರಿ ಕೂಡ ಚೆನ್ನಾಗಿ ಕುಡಿದು ಮತ್ತಿನಲ್ಲೇ ಮನೆಗೆ ಬಂದಿದ್ದಾನೆ. ಕುಡಿದು ಬಂದ ಗಂಡನ ಬಳಿ ನವ್ಯಾ ಕೇಳಿದ್ದು ಒಂದೇ ಪ್ರಶ್ನೆಯಂತೆ. ಪ್ರತಿನಿತ್ಯ ಕುಡಿದು ಲೇಟ್ ಆಗಿ ಬರ್ತೀಯಾ ಯಾಕೆ ಎಂದಿದ್ದಾಳೆ. ಇದೇ ವೇಳೆ ಗಂಡ-ಹೆಂಡ್ತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಅಮಲಿನಲ್ಲಿ ಸತೀಶ್, ನವ್ಯಾಗೆ ರಾಡ್ನಿಂದ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಸತೀಶ್ ಕುಮಾರ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
