Home » ವಿಷ ಸೇವಿಸಿ ಪತಿ ಆತ್ಮಹತ್ಯೆ ,ಮನನೊಂದು ಪತ್ನಿಯೂ ನೇಣು ಬಿಗಿದು ಆತ್ಮಹತ್ಯೆ

ವಿಷ ಸೇವಿಸಿ ಪತಿ ಆತ್ಮಹತ್ಯೆ ,ಮನನೊಂದು ಪತ್ನಿಯೂ ನೇಣು ಬಿಗಿದು ಆತ್ಮಹತ್ಯೆ

by Praveen Chennavara
0 comments

Chikkamagaluru sucide case : ಚಿಕ್ಕಮಗಳೂರು: ಪತಿ ಆತ್ಮಹತ್ಯೆ ಮಾಡಿದರಿಂದ ಮನನೊಂದು ಪತ್ನಿಯೂ ಆತ್ಮಹತ್ಯೆ (Chikkamagaluru sucide case) ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿಯಲ್ಲಿ ನಡೆದಿದೆ.

ಅನೈತಿಕ ಸಂಬಂಧದಿಂದ ಪತಿಯ ಕೊಲೆ ಎಂದು ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪತ್ನಿ ನೇಣಿಗೆ ಶರಣಾಗಿದ್ದಾರೆ.

ಜಗದೀಶ್ (34) ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಗದೀಶ್ ಆತ್ಮಹತ್ಯೆಗೆ ಪತ್ನಿ ನೇತ್ರಾವತಿ (30ವ.) ಕಾರಣ ಎಂದು ಕುಟುಂಬ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು.

ಮನೆಯಿಂದ ನಾಪತ್ತೆಯಾಗಿದ್ದ ನೇತ್ರಾವತಿ ಸಮೀಪದ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment