Home » ತೆಂಗಿನಮರ ಕಡಿಯುತ್ತಿದ್ದಾಗ ಮೈಮೇಲೆ ಬಿದ್ದು ನವವಿವಾಹಿತ ಮೃತ್ಯು

ತೆಂಗಿನಮರ ಕಡಿಯುತ್ತಿದ್ದಾಗ ಮೈಮೇಲೆ ಬಿದ್ದು ನವವಿವಾಹಿತ ಮೃತ್ಯು

by Praveen Chennavara
0 comments

ಬಂಟ್ವಾಳ : ತೆಂಗಿನ ಮರ ಬಿದ್ದು ಯುವಕನೋರ್ವ ಮೃತಪಟ್ಟ ಧಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜ. 9ರಂದು ನಡೆದಿದೆ.

ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ಯುವಕ. ಇವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.

ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನಮರ 3 ಕಡಿಯುವ ಗುತ್ತಿಗೆಯನ್ನು ಯತಿರಾಜ್ ಅವರು ಪಡೆದುಕೊಂಡಿದ್ದು, ಆ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕಡಿಯುತ್ತಿದ್ದ ತೆಂಗಿನ ಮರ ಯತಿರಾಜ್ ಅವರ ಮೇಲೆ ಬಿದ್ದಿದ್ದು ಗಾಯಗೊಂಡ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾರೂ ಆದಾಗಲೇ ಅವರು
ಮೃತಪಟ್ಟಿದ್ದರು ಎನ್ನಲಾಗಿದೆ.

You may also like

Leave a Comment