Home » ಉಡುಪಿ : ತೆಂಗಿನ ಬೊಂಡದಿಂದ ವೃದ್ಧ ಅತ್ತೆಗೆ ಹೊಡೆದು, ಬೆದರಿಕೆ ಹಾಕಿದ ಪಾಪಿ ಅಳಿಯ! ಅತ್ತೆ ಆಸ್ಪತ್ರೆಗೆ ದಾಖಲು

ಉಡುಪಿ : ತೆಂಗಿನ ಬೊಂಡದಿಂದ ವೃದ್ಧ ಅತ್ತೆಗೆ ಹೊಡೆದು, ಬೆದರಿಕೆ ಹಾಕಿದ ಪಾಪಿ ಅಳಿಯ! ಅತ್ತೆ ಆಸ್ಪತ್ರೆಗೆ ದಾಖಲು

0 comments

ಉಡುಪಿ: ತೆಂಗಿನ ಬೊಂಡದಿಂದ ಅಳಿಯನೊಬ್ಬ
ವೃದ್ಧ ಅಂಗವಿಕಲೆ ಅತ್ತೆಗೆ ಹೊಡೆದು ಗಾಯಗೊಳಿಸಿ ಜೀವಬೆದರಿಕೆ ಹಾಕಿದ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಚಿ ಖಾರ್ವಿ (65) ಅವರು ಮಗಳು ಲಕ್ಷ್ಮಿಯನ್ನು ಗಂಗಾಧರ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನ ಕಿರುಕುಳದಿಂದ ಮಗಳು ತಾಯಿ ಮನೆಗೆ ವಾಪಾಸ್ಸಾಗಿ ಅಲ್ಲೇ ವಾಸವಾಗಿದ್ದಳು.

ಆದರೆ ಮೇ.4 ರಂದು ಅಳಿಯ ಗಂಗಾಧರನು ಮಾಚಿ ಖಾರ್ವಿ ಅವರ ಮನೆಗೆ ನುಗ್ಗಿ ಪತ್ನಿಗೆ ಹಲ್ಲೆ ನಡೆಸಲು ಮುಂದಾಗಿ ಹೊಡೆಯಲು ಮುಂದಾಗಿದ್ದಾನೆ.
ಈ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಬಂದ ಅತ್ತೆಯ ಎದೆಗೆ ಅಲ್ಲೇ ಬಿದ್ದಿದ್ದ ಒಣಗಿದ ತೆಂಗಿನ ಬೊಂಡವನ್ನು ಬಿಸಾಡಿದ್ದಾನೆ.

ಬೊಬ್ಬೆ ಕೇಳಿ ಸ್ಥಳೀಯರು ತಕ್ಷಣ ಬಂದು ಜೀವಬೆದರಿಕೆ ಹಾಕಿ ಆರೋಪಿ ಓಡಿ ಹೋಗಿದ್ದಾನೆ. ಸದ್ಯ ಗಾಯಗೊಂಡ ಮಾಚಿ ಖಾರ್ವಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment