Home » ದೂರು ಕೊಡಲು ಬಂದ ಮಹಿಳೆಯಿಂದಲೇ ಅಂಗಿ ಬಿಚ್ಚಿ, ಮಸಾಜ್ ಮಾಡಿಸಿದ ಠಾಣಾಧಿಕಾರಿ| ಈ ವೀಡಿಯೋಗೆ ಸಾರ್ವಜನಿಕ ವಲಯದಲ್ಲಿ ಸಖತ್ ಆಕ್ರೋಶ

ದೂರು ಕೊಡಲು ಬಂದ ಮಹಿಳೆಯಿಂದಲೇ ಅಂಗಿ ಬಿಚ್ಚಿ, ಮಸಾಜ್ ಮಾಡಿಸಿದ ಠಾಣಾಧಿಕಾರಿ| ಈ ವೀಡಿಯೋಗೆ ಸಾರ್ವಜನಿಕ ವಲಯದಲ್ಲಿ ಸಖತ್ ಆಕ್ರೋಶ

by Mallika
0 comments

ದೂರು ನೀಡಲು ಬಂದ ಮಹಿಳೆಯ ಬಳಿ ಮಸಾಜ್ ಮಾಡಿಸಿಕೊಂಡು ದರ್ಪ ಮೆರೆದ ಠಾಣಾಧಿಕಾರಿ: ವಿಡಿಯೋ ವೈರಲ್

ದೂರು ಕೊಡಲು ಠಾಣೆಗೆ ಬಂದ ಮಹಿಳೆಯ ಬಳಿ ಠಾಣೆಯ ಒಳಗಡೆ ಮಸಾಜ್ ಮಾಡಿಸಿಕೊಂಡು ಹಿರಿಯ ಅಧಿಕಾರಿ ದರ್ಪ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಪೊಲೀಸ್ ಠಾಣೆಯಲ್ಲೇ ಮಹಿಳೆಯೊಬ್ಬರ ಬಳಿ ಮಸಾಜ್ ಮಾಡಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಈ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ.

ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಹೊರಠಾಣೆಯ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಅವರು ತಮ್ಮ ಮೇಲಿನ ಅಂಗಿಯನ್ನು ಬಿಚ್ಚಿ ಮಹಿಳೆಯ ಬಳಿ ಮಸಾಜ್ ಮಾಡಿಸಿಕೊಳ್ಳುತ್ತಾ ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಈ ವಿಡಿಯೋ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಅವರ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿ ಶಶಿಭೂಷಣ ಸಿನ್ಹಾ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗೆ ಸಾರ್ವಜನಿಕ ವಲಯದಲ್ಲೂ
ಆಕ್ರೋಶ ವ್ಯಕ್ತವಾಗಿದೆ.

You may also like

Leave a Comment