Free Bus for Women: ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿಗಳನ್ನು ತಕ್ಷಣ ಪೂರೈಸಲು ಎಲ್ಲಾ ಕಡೆಯಿಂದ ಒತ್ತಡ ಬರುತ್ತಿದೆ. ವಿರೋಧ ಪಕ್ಷಗಳು ಕೂಡ ಕಾಂಗ್ರೆಸ್ ಸರ್ಕಾರದ ಹಿಂದೆ ಬಿದ್ದಿವೆ. ಈ ಮಧ್ಯೆ ಜನರೇ ನೇರ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ವಿದ್ಯುತ್ ಬಿಲ್ ಕಟ್ಟಲು, ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಮಾಡಲು ಮಹಿಳೆಯರು ಪ್ರತಿಭಟನೆ ತೋರುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಫ್ರೀ ಬಸ್ ( Free Bus for Women) ಸ್ಕೀಮ್ಗೆ ದಿನಗಣನೆ ಹೋಗಿ ಕ್ಷಣಗಣನೆ ಶುರುವಾಗಿದೆ. ಯೋಜನೆಯ ಜಾರಿಗೆ ಬೇಕಾದ ಸಕಲ ತಯಾರಿಗಳನ್ನು ಸರ್ಕಾರ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದ್ದು, ಒಂದು ಕರಡು ರೂಪುರೇಶಿ ತಯಾರಾಗಿದೆ ಎನ್ನಲಾಗಿದೆ.
ಸಾರಿಗೆ ಇಲಾಖೆಗೆ ಈ ಉಚಿತ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಮಾರ್ಗಸೂಚಿ ಹಾಗೂ ಷರತ್ತುಗಳನ್ನು ಸಿದ್ಧಪಡಿಸಿಕೊಂಡು ಕಾಸ್ಟ್ ಎಸ್ಟಿಮೇಶನ್ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ಈ ಯೋಜನೆಯ ಕಂಪ್ಲೀಟ್ ಷರತ್ತು ಹಾಗೂ ನಿರ್ಬಂಧಗಳನ್ನು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. ಎರಡು ದಿನಗಳಲ್ಲಿ ಉಚಿತ ಬಸ್ ಪ್ರಯಾಣ ಮಾರ್ಗಸೂಚಿ ಸರ್ಕಾರದ ಕೈ ಸೇರುವ ನಿರೀಕ್ಷೆ ಇದೆ. ಕರಡು ಪ್ರತಿ ಕೈ ಸೇರುವ ಅಷ್ಟರಲ್ಲಿ ರಾಜ್ಯ ಮಂತ್ರಿಮಂಡಲ ರಚನೆಯಾಗಲಿದೆ. ಇವತ್ತೇ ಸಂಜೆಯೊಳಗೆ ಆಯ್ಕೆಯಾಗುವ ಮಂತ್ರಿಗಳ ಹೆಸರು ಮತ್ತು ಹಂಚಿಕೆಯಾಗುವ ಖಾತೆಗಳ ಎಲ್ಲಾ ವಿವರ ಅಧಿಕೃತವಾಗಿ ಪ್ರಕಟವಾಗುವ ನೀರಿಕ್ಷೆ ಇದೆ.
ಉಚಿತ ಬಸ್ ಪ್ರಯಾಣದ ಗ್ಯಾರಂಟಿಗಳಿಗೆ ಏನೆಲ್ಲಾ ಷರತ್ತುಗಳನ್ನು ವಿಧಿಸಲಿದ್ದಾರೆ ಎಂಬ ಕುತೂಹಲ ಜನರನ್ನು ಕಾಡುತ್ತಿದೆ. ಈಗ ಬಂದಿರುವ ಮಾಹಿತಿಗಳ ಪ್ರಕಾರ ಕರಡು ಕಂಡೀಷನ್ ಗಳ ಪಟ್ಟಿ ರೆಡಿಯಾಗಿದೆ. ಹಾಗಾದರೆ ಏನೆಲ್ಲ ಕಂಡೀಶನ್ ಗಳು ಇರಬಹುದು ? ಇಲ್ಲಿದೆ ನೋಡಿ ಸಂಭಾವ್ಯ ಕಂಡೀಷನ್ ಗಳು.
* ಕರ್ನಾಟಕದ ಮಹಿಳಾ ನಾಗರಿಕರಿಗೆ ಮಾತ್ರ ಈ ಯೋಜನೆ ಲಭ್ಯ
*ಎಲ್ಲಾ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ
* ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡಲು ಮಹಿಳೆಯರಿಗೆ ಪ್ರತ್ಯೇಕ ಬಸ್ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ.
* ಉಚಿತ ಬಸ್ ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ
* ಈ ಯೋಜನೆಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡುವ ಅಗತ್ಯ ಇರುವುದಿಲ್ಲ
* ರಾಜ್ಯ ಗಡಿಯೊಳಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ, ಹೊರ ರಾಜ್ಯಕ್ಕೆ ಉಚಿತ ಪ್ರಯಾಣ ಇರುವುದಿಲ್ಲ.
* ರಾಜಹಂಸ ಐರಾವತ ಮತ್ತು ಸ್ಲೀಪಿಂಗ್ ಕೋಚ್ ಮತ್ತಿತರ ಐಷಾರಾಮಿ ಬಸ್ ವರ್ಗಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ
* ಒಬ್ಬರು ಎಷ್ಟು ಸಲ ಬೇಕಾದರೂ ಪ್ರಯಾಣಿಸಬಹುದು
* ಮಹಿಳೆಯರಿಗೆ ವಯೋಮಿತಿ ಹಾಕುತ್ತಾ? ಸದ್ಯಕ್ಕೆ ಉತ್ತರ ಇಲ್ಲ
* ಬಿಪಿಲ್ ಕಾರ್ಡುದಾರರಿಗೆ ಮಾತ್ರ ಇರಲಾರದು. ಆದರೆ ಹೈ ಟ್ಯಾಕ್ಸ್ ಪೇ ಮಾಡುವವರಿಗೆ ಈ ಸೌಲಭ್ಯ ಇರಲಾರದು
* ಮಹಿಳೆಯರಿಗೆ ಇಂತದ್ದೇ ರೂಟಲ್ಲಿ ಪ್ರಯಾಣಿಸಬೇಕು ಅನ್ನೋ ಕಂಡೀಷನ್ ಹಾಕೋ ಸಂಭವನೂ ಇದೆ ( ಆದರೆ ನಿಮಗೂ ಫ್ರೀ, ನನಗೂ ಫ್ರೀ, ಅಮ್ಮನ ಮನೆಗೂ ಹೋಗಿ, ಅತ್ತೆ ಮನೆಗೆ ಬೇಕಾದ್ರೆ ಹೋಗಿ, ಶಾಪಿಂಗ್ ಗೆ ಬೇಕಾದ್ರೂ ಸಾಗಿ ಎಂದು ಡೈಲಾಗ್ ಬೆರೆಸಿ ಹೇಳಿತ್ತು ಕಾಂಗ್ರೆಸ್. ಮಹಿಳೆಯರು ಮನೆಯಲ್ಲಿ ತಂದು ಹಾಕುವ ಗಂಡನ ಮಾತನ್ನೇ ಕೇಳೋದಿಲ್ಲ. ಇನ್ನೂ ಸರ್ಕಾರದ ಮಾತು ಕೇಳ್ತಾರಾ ? ಆದುದರಿಂದ ಮಹಿಳೆಯರನ್ನು ಒಪ್ಪಿಸುವುದು ಕಷ್ಟ !)
ಈ ಎಲ್ಲಾ ಅಂಶ ಇನ್ನು ಕೆಲವು ನಿರ್ಬಂಧಗಳು ಮಾರ್ಗಸೂಚಿಯಲ್ಲಿ ಇರುವ ಸಾಧ್ಯತೆ ಇದೆ. ಈ ಕುರಿತಂತೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ತಕ್ಷಣ ಅಂದರೆ ಜೂನ್ ತಿಂಗಳ ದಿನದಿಂದಲೇ ಈ ಯೋಜನೆ ಜಾರಿ ಆಗುವ ನಿರೀಕ್ಷೆ ಇದೆ. ಸರ್ಕಾರದ ಒಂದು ಆದೇಶಕ್ಕಾಗಿ ಕನ್ನಡದ ಮಹಿಳಾ ಮಣಿಗಳು ಬ್ಯಾಗ್ ಹೊಂದಿಸಿಕೊಂಡು ರೆಡಿಯಾಗಿ ಕಾಯುತ್ತಿದ್ದಾರೆ.
