Anna bhagya: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಅನ್ನಭಾಗ್ಯವೂ (Anna bhagya)ಒಂದು. ಈ ಯೋಜನೆಯಡಿಯಲ್ಲಿ ಸರ್ಕಾರ ಪ್ರತೀ ಕುಟುಂಬಕ್ಕೂ 10ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿತ್ತು. ಆದರೆ ಅಕ್ಕಿಯ ಅಭಾವದಿಂದ 5 ಕೆ.ಜಿ ಅಕ್ಕಿ ಹಾಗೃ ಉಳಿದ 5 ಕೆ.ಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಹೇಳಿತ್ತು. ಆದರೆ ಈ ಹಣ ಬೇಕೆಂದರೆ ಫಲಾನುಭವಿಗಳು ಬ್ಯಾಂಕ್ ಅಕೌಂಟ್ ಹೊಂದಬೇಕಿತ್ತು. ಆದರೆ ಕೆಲವರು ಬ್ಯಾಂಕ್ ಅಕೌಂಟ್ ಇಲ್ಲದೆ ಈ ಯೋಜನೆಯಿಂದ ವಂಚಿತರಾಗುತ್ತಿದ್ದರು. ಆದರೀಗ ಇಂತವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಸರ್ಕಾರದಿಂದ ನೀಡುತ್ತಿದ್ದು, ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಬ್ಯಾಂಕ್ ಖಾತೆ ಇಲ್ಲದವರಿಗೆ ಸರ್ಕಾರದಿಂದಲೇ ಅಕೌಂಟ್ ಮಾಡಿಸಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲಾಗುತ್ತಿದೆ.
ಬ್ಯಾಂಕ್ ಖಾತೆ ಇಲ್ಲದ 21 ಲಕ್ಷ ಪಡಿತರ ಚೀಟಿದಾರರಿದ್ದು ಅಂತಹ ಪಡಿತರ ಚೀಟಿದಾರರಿಗೆ ಸರ್ಕಾರದಿಂದಲೇ ಬ್ಯಾಂಕ್ ಅಕೌಂಟ್ ಮಾಡಿಸಲಾಗುತ್ತಿದೆ. ಜುಲೈನಲ್ಲಿ 3.45 ಕೋಟಿ ಜನರಿಗೆ 566 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಆಗಸ್ಟ್ ನಲ್ಲಿ 3.69 ಕೋಟಿ ಪಡಿತರ ಚೀಟಿದಾರರಿಗೆ 606 ಕೋಟಿ ರೂ. ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ಇಲ್ಲದ 21 ಲಕ್ಷ ಪಡಿತರ ಚೀಟಿದಾರರಿದ್ದು, 2 ಲಕ್ಷ ಜನರಿಗೆ ನಾವೇ ಸರ್ಕಾರ ದಿಂದ ಖಾತೆ ಮಾಡಿಸಿದ್ದೇವೆ. ಇನ್ನು 14 ಲಕ್ಷ ಜನರಿಗೆ ಖಾತೆ ಮಾಡಿಸಲಾಗುತ್ತಿದೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಬ್ಯಾಂಕ್ ಖಾತೆ ಇಲ್ಲದವರಿಗೆ ಸರ್ಕಾರದಿಂದಲೇ ಅಕೌಂಟ್ ಮಾಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral video: ಅರೆ ಏನಾಶ್ಚರ್ಯ.. ಇಂಜಿನ್ ಇಲ್ಲದೆ ಚಲಿಸಿದ ರೈಲು- ನಿಬ್ಬೆರಾಗಿ ನಿಂತು ನೋಡಿದ ಜನ !! ವಿಡಿಯೋ ವೈರಲ್
