Home » Shakti yojana: ಶಕ್ತಿ ಯೋಜನೆಯ ಉಚಿತ ಬಸ್ ಹೊರಟ ಕೆಲವೇ ಗಂಟೆಗಳಲ್ಲಿ ಅಪಘಾತ !

Shakti yojana: ಶಕ್ತಿ ಯೋಜನೆಯ ಉಚಿತ ಬಸ್ ಹೊರಟ ಕೆಲವೇ ಗಂಟೆಗಳಲ್ಲಿ ಅಪಘಾತ !

by ಹೊಸಕನ್ನಡ
0 comments
Shakti yojana

Shakti yojana: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ (Shakti yojana) ಚಿತ್ರದುರ್ಗ ದಿಂದ ಚಾಲನೆ ನೀಡಿದ ಕೆಲವೇ ಗಂಟೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್, ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಅಪಘಾತಕ್ಕಿಡಾಗಿದೆ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government)ನುಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇವುಗಳ ಪೈಕಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆಗೆ)ಕ್ಕೆ ನಿನ್ನೆ ತಾನೇ ಅಧಿಕೃತವಾಗಿ ಚಾಲನೆಸಿಕ್ಕಿದ್ದು, ನಾರಿಮಣಿಯರು ಉಚಿತ ಪ್ರಯಾಣವನ್ನು ಸಂಭ್ರಮಿಸುತ್ತಿದ್ದಾರೆ. ಆದರೆ ಚಿತ್ರದುರ್ಗದಲ್ಲಿ ಈ ಉಚಿತ ಸಂಚಾರಕ್ಕೆ ಚಾಲನೆ ಗೊಳಿಸಿದ ಕೆಲವೇ ಕ್ಷಣಗಳಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಅಪಘಾತಗೊಂಡಿದೆ.

ಅಂದಹಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಿದರು. ಅಂತೆಯೇ ಜಿಲ್ಲಾ ಕೇಂದ್ರಗಳಲ್ಲೂ ಚಾಲನೆ ದೊರೆತಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಮಹಿಳೆಯರ ಉಚಿತ ಪ್ರಯಾಣ ಕಾರ್ಯಕ್ರಮ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಸಚಿವ ಡಿ ಸುಧಾಕರ್ ಚಾಲನೆ ನೀಡಿದರು. ಬಳಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಸಚಿವ ಡಿ ಸುಧಾಕರ್ ಟಿಕೆಟ್ ನೀಡಿ ಕಳುಹಿಸಿ ಕೊಟ್ಟರು. ಆದ್ರೇ ಹೀಗೆ ತೆರಳಿದಂತ ಮಹಿಳೆಯರ ಉಚಿತ ಟಿಕೆಟ್ ಬಸ್, ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ಒಳಗಾಗಿದೆ.

ಇದನ್ನೂ ಓದಿ: VIRAL VIDEO: ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ,100 ಕ್ಕೂ ಹೆಚ್ಚು ಮಂದಿ ದಾಳಿ – ಭಾರತೀಯ ಯೋಧನ ಅಳಲು !!

You may also like

Leave a Comment