Home » ಪತ್ನಿಗಿಲ್ಲ ಪತಿಯ ಜೀವನಾಂಶ!!ವಿದ್ಯಾವಂತ ಮಹಿಳೆಯರ ಆತಂಕಕ್ಕೆ ಕಾರಣವಾದ ಕೋರ್ಟ್ ತೀರ್ಪಿನಲ್ಲೇನಿದೆ!?

ಪತ್ನಿಗಿಲ್ಲ ಪತಿಯ ಜೀವನಾಂಶ!!ವಿದ್ಯಾವಂತ ಮಹಿಳೆಯರ ಆತಂಕಕ್ಕೆ ಕಾರಣವಾದ ಕೋರ್ಟ್ ತೀರ್ಪಿನಲ್ಲೇನಿದೆ!?

0 comments

ಪತಿಯಿಂದ ವಿಚ್ಛೇದನ ಪಡೆದ ಬಳಿಕ ಪತ್ನಿ ವಿದ್ಯಾವಂತೆಯಾಗಿದ್ದಲ್ಲಿ ಜೀವನಾಂಶ ಬೇಕಿಲ್ಲ ಎಂದು ಕೋರ್ಟ್ ಶಾಕಿಂಗ್ ತೀರ್ಪೊಂದನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆಯಾಗಿ, ಪತಿ ಪತ್ನಿಯ ಸಂಸಾರ ಖುಷಿಯಿಂದ ಸಾಗಲಿದೆ ಎನ್ನುವ ಮಾತುಗಳು ಉದಾಹರಣೆಗಳ ಸಹಿತ ಕೇಳಿಬರುತ್ತಿದೆ.

ಮುಂಬೈ ನಗರದ ಕೋರ್ಟ್ ಇಂತಹ ತೀರ್ಪುನ್ನು ಎತ್ತಿ ಹಿಡಿದಿದ್ದು, ವಿದ್ಯಾವಂತ ಮಹಿಳೆಯರ ಶಾಕ್ ಗೆ ಕಾರಣವಾಗಿದೆ.

ಪ್ರಕರಣದ ವಿವರ: ಮುಂಬೈ ನಗರದ ಮಹಿಳೆಯೊಬ್ಬರು ಪತಿಯ ಮೇಲೆ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದು, ಬಳಿಕ ಕೋರ್ಟ್ ಮೆಟ್ಟಿಲೇರಿತ್ತಲ್ಲದೇ ಜೀವನಾಂಶದ ಕೋರಿಕೆ ಸಲ್ಲಿಕೆಯಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮೊಕದ್ದಮೆ ಹೂಡಿದ ಮಹಿಳೆ ದಂತ ವೈದ್ಯೆಯಾಗಿದ್ದು, ಆರ್ಥಿಕವಾಗಿ ಉತ್ತಮವಾಗಿದ್ದು,ಅಲ್ಲದೇ ವಿಚ್ಛೇದನದ ಬಳಿಕ ಆರ್ಥಿಕ ಸಬಲತೆ ಇರುವ ಪತ್ನಿಗೆ ಪತಿಯ ಜೀವನಾಂಶದ ಅಗತ್ಯತೆ ಇರುವುದಿಲ್ಲ ಎಂದಿದೆ.

ಸದ್ಯ ನ್ಯಾಯಾಲಯದ ತೀರ್ಪು ವಿದ್ಯಾವಂತ ಮಹಿಳೆಯರಲ್ಲಿ ಶಾಕ್ ಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಅಪರೂಪವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

You may also like

Leave a Comment