Home » Vinay Guruji: ವಿನಯ್ ಗುರೂಜಿ ಹೆಸ್ರಲ್ಲಿ ನಕಲಿ ಫೇಸ್​​ಬುಕ್ ಅಕೌಂಟ್ ಸೃಷ್ಟಿಸಿ ವಂಚನೆ.! ಹಣಕ್ಕಾಗಿ ಬೇಡಿಕೆ ಇಟ್ಟ ಸೈಬರ್‌ ಕಳ್ಳರು.!

Vinay Guruji: ವಿನಯ್ ಗುರೂಜಿ ಹೆಸ್ರಲ್ಲಿ ನಕಲಿ ಫೇಸ್​​ಬುಕ್ ಅಕೌಂಟ್ ಸೃಷ್ಟಿಸಿ ವಂಚನೆ.! ಹಣಕ್ಕಾಗಿ ಬೇಡಿಕೆ ಇಟ್ಟ ಸೈಬರ್‌ ಕಳ್ಳರು.!

1 comment
Vinay Guruji

Vinay Guruji: ಬೆಂಗಳೂರು : ರಾಜ್ಯದಲ್ಲಿ ಎಗ್ಗಿಲ್ಲದೇ ಸೈಬರ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪ್ರಸಿದ್ದಿ ಪಡೆದ ವ್ಯಕ್ತಿಗಳನ್ನೆ ಟಾರ್ಗೇಟ್‌ ಮಾಡಿದ್ದು, ಸಾಮಾಜಿಕ ತಾಣಗಳ ಮೂಲಕ ಮೆಸೇಜ್‌ ಕಳುಹಿಸಿ ಕನ್ನ ಹಾಕಲು ಮುಂದಾಗಿದ್ದು ಬೆಳಕಿಗೆ ಬಂದಿದೆ. ಅದರಲ್ಲೂ ಅವಧೂತ ವಿನಯ್ ಗುರೂಜಿ ಹೆಸ್ರಲ್ಲಿ ನಕಲಿ ಫೇಸ್​​ಬುಕ್ ಅಕೌಂಟ್ ಸೃಷ್ಟಿಸಿ ವಂಚನೆ ನಡೆಸಲು ಯತ್ನಿಸಿದ್ದಾರೆ ಎಂದು ವರದಿ ಬಹಿರಂಗವಾಗಿದೆ.

ವಿಜಯನಗರ ಎಸ್​ಪಿ ಹರಿಬಾಬು ಅವರ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಅಕೌಂಟ್​​ ತೆರೆದು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಕೇಸ್‌ ದಾಖಲಾಗುತ್ತಿದ್ದ ಬೆನ್ನಲ್ಲೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಿನಯ್ ಗುರೂಜಿ (Vinay Guruji) ಹೆಸ್ರಲ್ಲಿ ನಕಲಿ ಫೇಸ್​​ಬುಕ್ ಅಕೌಂಟ್ ಸೃಷ್ಟಿಸಿ, 45 ದಿನ ನಿಮಗೆ ಗಂಡಾಂತರ ಇದೆ. ಕಾಳ ಸರ್ಪ ದೋಷವಿದೆ ನಿಮಗೆ ಎಂದು ಸುಳ್ಳು ಸುಳ್ಳು ಮೆಸೇಜ್ ಕಳಿಸಿ, ಭಯ ಹುಟ್ಟಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಆಶ್ರಮದ ಸಿಬ್ಬಂದಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೋಷಿಯಲ್‌ ಮಿಡಿಯಾಗಳ ಬಳಕೆ ಹೆಚ್ಚಾದಂತೆ ಸೈಬರ್‌ ಕಳ್ಳರ ಖತರ್ನಾಕ್‌ ಐಡಿಯಾಗಳು ಹೆಚ್ಚಾಗಿದ್ದು, ಜನರಿಗೆ ಪಂಗನಾಮ ಹಾಕುವ ಬಗ್ಗೆ ಕೊಂಚ ಎಚ್ಚರ ವಹಿಸೋದು ಉತ್ತಮ.

 

ಇದನ್ನು ಓದಿ: UPSC Exam Result: 2022ನೇ ಸಾಲಿನ UPSC ಪರೀಕ್ಷೆಯ ಫಲಿತಾಂಶ ಪ್ರಕಟ 

You may also like

Leave a Comment