Home » Crime News: ಮಾವನೊಂದಿಗೆ ಅಕ್ರಮ ಸಂಬಂಧ; ಹಣ ನೀಡದಕ್ಕೆ ಮರ್ಮಾಂಗ ಕತ್ತರಿಸಿ ಘೋರ ಹತ್ಯೆ ಮಾಡಿದ ಮಹಿಳೆ!!!

Crime News: ಮಾವನೊಂದಿಗೆ ಅಕ್ರಮ ಸಂಬಂಧ; ಹಣ ನೀಡದಕ್ಕೆ ಮರ್ಮಾಂಗ ಕತ್ತರಿಸಿ ಘೋರ ಹತ್ಯೆ ಮಾಡಿದ ಮಹಿಳೆ!!!

by Mallika
0 comments

ತನ್ನ ಮಾವನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು ಮಾತ್ರವಲ್ಲದೇ, ಆತ ಹಣ ನೀಡಿಲ್ಲವೆಂಬ ಕಾರಣಕ್ಕೆ ಕೊಲೆ ಮಾಡಿದ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ.

ಮಹಿಳೆ ಮಾವನ ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಿ ಹತ್ಯೆ ಮಾಡಿದ್ದು, ತನಗೆ ವಿದೇಶಕ್ಕೆ ಹೋಗಲು ಎರಡು ಲಕ್ಷ ಹಣ ನೀಡದೇ ಇರುವುದಕ್ಕೆ, ಹಾಗೂ ತನ್ನ ಬೇಡಿಕೆ ಪೂರೈಸದೇ ಇರುವುದಕ್ಕೆ 75 ವರ್ಷದ ಮಾವನ ಕೊಲೆಯನ್ನು ಮಾಡಿರುವ ಆರೋಪ ಈ ಮಹಿಳೆಯ ಮೇಲಿದೆ.

ಮೃತ ವ್ಯಕ್ತಿಯನ್ನು ಜಗದೀಶ್‌ ಎಂದು ಗುರುತಿಸಲಾಗಿದೆ. ಮಹಿಳೆಯ ಮಾವನಾಗಿದ್ದು, ಈ ವ್ಯಕ್ತಿಯೊಂದಿಗೆ ಈಕೆ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಬದಲಾಗಿ ಹಣವನ್ನು ನೀಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಈಕೆ ನಾನು ಫೇಸ್‌ಬುಕ್‌ ಮೂಲಕ ಓರ್ವ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದೇನೆ. ವಿದೇಶಕ್ಕೆ ಹೋಗಲು ಬಯಸುತ್ತೇನೆ, ನನಗೆ ಹಣ ಕೊಡು ಎಂದು ಮಾವನಲ್ಲಿ ಕೇಳಿದ್ದಾಳೆ. ಆದರೆ ಆತ ದುಡ್ಡು ನೀಡಲು ನಿರಾಕರಿಸಿದ್ದಾನೆ. ಇದಕ್ಕೆ ಸಿಟ್ಟುಗೊಂಡು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿ ಮೂರು ದಿನದಿಂದ ಕಾಣೆಯಾದುದನ್ನು ಕಂಡು, ಶಂಕೆಗೊಂಡ ವ್ಯಕ್ತಿಯ ಹಿರಿಯ ಮಗ ರಾಜಸ್ಥಾನದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಕೇಳಿದ್ದಾನೆ. ಆದರೆ ಎಲ್ಲಿಯೂ ಸುಳಿವು ಇರಲಿಲ್ಲ. ನಂತರ ಹುಡುಕಿದಾಗ ಬಚ್ಚಲು ಮನೆಯಲ್ಲಿ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಟ್ಟಿ ವಸ್ತುವಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು ಇದರಿಂದ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

 

You may also like

Leave a Comment