Home » Gang Rape : ಹಾನಗಲ್ ಗ್ಯಾಂಗ್ ರೇಪ್ ಕೇಸ್ ಕುರಿತು ಸ್ಪೋಟಕ ಮಾಹಿತಿ ಬಹಿರಂಗ; ಸಂತ್ರಸ್ತೆ ಬಿಚ್ಚಿಟ್ಲು ರೋಚಕ ಸತ್ಯ!!

Gang Rape : ಹಾನಗಲ್ ಗ್ಯಾಂಗ್ ರೇಪ್ ಕೇಸ್ ಕುರಿತು ಸ್ಪೋಟಕ ಮಾಹಿತಿ ಬಹಿರಂಗ; ಸಂತ್ರಸ್ತೆ ಬಿಚ್ಚಿಟ್ಲು ರೋಚಕ ಸತ್ಯ!!

1 comment
Gang Rape

Gang Rape: ಎಲ್ಲೆಡೆ ಚರ್ಚೆಗೆ ಕಾರಣವಾಗಿರುವ ಹಾನಗಲ್‌ ಗ್ಯಾಂಗ್‌ ರೇಪ್‌ (Haveri Gang Rape)ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದೆ.

ಹಾನಗಲ್‌ನ ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆಯನ್ನು ಭಾನುವಾರ ದಿಢೀರ್‌ ಆಗಿ ಶಿರಸಿಯಲ್ಲಿರುವ ಆಕೆಯ ಊರಿಗೆ ಪೊಲೀಸರು ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂತ್ರಸ್ತ ಮಹಿಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಐದು ಮಂದಿಯನ್ನು ಬಂಧಿಸಿದ್ದಾರೆ. ಆದರೆ, ಇವರಲ್ಲಿ ಇಬ್ಬರು ನನ್ನ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Viral News: 21 ವರ್ಷದ ಹುಡುಗಿಗೆ 81 ಲಕ್ಷ ಸಂಬಳ!ತಿಂಗಳು 4 ರಜೆ, ಈಗ ಮಾಡ್ತಾ ಇರೋ ಜಾಬ್ ಆದ್ರು ಯಾವುದು?

ಪೊಲೀಸರು ಸಂತ್ರಸ್ತ ಮಹಿಳೆಗೆ ಬಂಧಿತರಿಬ್ಬರ ಫೊಟೋ ತೋರಿಸಿದ್ದು, ಅವರಿಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ (Physical Assault)ಎಸಗಿದವರಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. ಇದರ ಜೊತೆಗೆ ನನ್ನ ಮೇಲೆ ನಡೆದ ದೌರ್ಜನ್ಯದ ವಿಡಿಯೋದಲ್ಲೂ ಆ ಇಬ್ಬರು ಇರಲಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ಎಂದು ಹೇಳಿ ಮನೆಗೆ ತಂದು ಬಿಟ್ಟಿದ್ದು, ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೆ ಬಿಟ್ಟು ಹೋಗಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ. ತನಗೆ ಜೀವ ಭಯವಿದ್ದರೂ ಪೊಲೀಸರನ್ನು ಮನೆಯ ಬಳಿ ಭದ್ರತೆಗೆ ನಿಯೋಜಿಸಿಲ್ಲ ಎಂದು ಸಂತ್ರಸ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

You may also like

Leave a Comment