Home » Murder Case: ಲೈಂಗಿಕತೆಗೆ ಒಪ್ಪದ ಮಹಿಳೆ, ತಲೆ ಮೇಲೆ ಕಲ್ಲು ಹಾಕಿ ಬೆಂಕಿ ಹಚ್ಚಿ ಕೊಲೆ!

Murder Case: ಲೈಂಗಿಕತೆಗೆ ಒಪ್ಪದ ಮಹಿಳೆ, ತಲೆ ಮೇಲೆ ಕಲ್ಲು ಹಾಕಿ ಬೆಂಕಿ ಹಚ್ಚಿ ಕೊಲೆ!

1 comment
Murder Case

Mumbai: ಬೀದಿ ಬದಿ ಮಲಗುತ್ತಿದ್ದ ಮಹಿಳೆಯೊಬ್ಬಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಸಂಬಂಧಿಕರಿಲ್ಲದ 40 ವರ್ಷದ ಮಹಿಳೆಯನ್ನು (Homeless Woman) ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ. ಇದರಿಂದ ಆಕೆಯನ್ನು ಅಮಾನುಷವಾಗಿ ಕಲ್ಲಿನಿಂದ ಜಜ್ಜಿ ಕೊಲೆ (Murder) ಮಾಡಿದ್ದ ದುಷ್ಟನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Lifestyle: ಥ್ರೆಡಿಂಗ್ ಮಾಡಿಸಿಕೊಂಡರೆ ಎಚ್ಚರ!! ಈ ತಪ್ಪುಗಳನ್ನು ಮಾಡದಿರಿ!!

ರಂಜಾನ್‌ ಶೇಖ್‌ (27) ಎಂಬಾತನೇ ಭೀಕರವಾಗಿ ಕೊಲೆ ಮಾಡಿದ ಆರೋಪಿ. ಮುಂಬೈ ನಗರದ ಸೆವ್ರೀ ಎಂಬಲ್ಲಿ ಈತ ಕಳೆದ ಜನವರಿಯಲ್ಲಿ ಮಹಿಳೆಯನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಹಲವು ದಿನಗಳ ಬಳಿಕ ಆರೋಪಿಯನ್ನು ಬಂಧನ ಮಾಡಿದ್ದಾರೆ. ವಿಚಾರಣೆಯ ಸಂದರ್ಭ ಆರೋಪಿ ತಾನು ಮಾಡಿರುವ ಹೀನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಸಪ್ನಾ ಸತೀಶ್‌ ಬಾಥಮ್‌ ಎಂಬ ಮಹಿಳೆಯು ಬೀದಿ ಬದಿ ಮಲಗುತ್ತಿದ್ದರು. ಇದನ್ನು ಕಂಡ ರಂಜಾನ್‌ ಶೇಖ್‌, ಜ.14 ರಂದು ಮಹಿಳೆಯನ್ನು ಕರೆದುಕೊಂಡು ಹೋಗಿ, ನಿನಗೆ ಮದ್ಯ ಕೊಡಿಸುವೆ ಬಾ ಎಂದು ಹೇಳಿ ಕರೆದುಕೊಂಡು ಹೋಗಿದ್ದ. ನಂತರ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯ ಮಾಡಿದ್ದಾನೆ. ಆದರೆ ಮಹಿಳೆಗೆ ಈತನ ಬೇಡಿಕೆಗೆ ಒಪ್ಪಲಿಲ್ಲ. ಎಷ್ಟೇ ಒತ್ತಾಯ ಮಾಡಿದರೂ ಒಪ್ಪದ್ದರಿಂದ ಕೋಪಗೊಂಡ ಮಹಿಳೆಯನ್ನು ಕೊಂದು ರಸ್ತೆ ಬದಿ ಎಸೆದು ಬಿಸಾಡಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶೇಖ್‌ನನ್ನು ಬಂಧನ ಮಾಡಿದ್ದಾರೆ.

You may also like

Leave a Comment