Home » Crime News: ದಿನ ರೀಲ್ಸ್‌ ಮಾಡುತ್ತಿದ್ದ ಸುಂದರಿ ಪತ್ನಿ, ಮಗುವನ್ನು ಕೊಂದ ಪತಿ; ದರೋಡೆ ಎಂದು ಕಥೆ ಕಟ್ಟಿದವ ಸಿಕ್ಕಿಬಿದ್ದದು ಹೇಗೆ?

Crime News: ದಿನ ರೀಲ್ಸ್‌ ಮಾಡುತ್ತಿದ್ದ ಸುಂದರಿ ಪತ್ನಿ, ಮಗುವನ್ನು ಕೊಂದ ಪತಿ; ದರೋಡೆ ಎಂದು ಕಥೆ ಕಟ್ಟಿದವ ಸಿಕ್ಕಿಬಿದ್ದದು ಹೇಗೆ?

1 comment
Crime News

Crime News: ಪತಿಯೊಬ್ಬ ತನ್ನ ಪತ್ನಿ, ಒಂದು ವರ್ಷದ ಮಗುವನ್ನು ಕೊಂದು ದರೋಡೆಯ ನಾಟಕವಾಡಿದ ಘಟನೆಯೊಂದು ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ನಡೆದಿದೆ.

ನೀರಜ್‌ ಕುಶ್ವಾಹ ಎಂಬಾತನೇ ಈ ಕೊಲೆ ಮಾಡಿದ ಆರೋಪಿ ಎಂದು ವರದಿಯಾಗಿದೆ.

ಘಟನೆ ವಿವರ; ಸುಮಾರು ಆರು ಮಂದಿ ರಾತ್ರಿ 1.30 ರ ಮನೆಗೆ ಬಂದು ನನ್ನ ಪತ್ನಿ ಹಾಗೂ ಮಗಳನ್ನು ಕೊಂದು ನನ್ನ ಬಾಯಿಗೆ ಸಾಕ್ಸ್‌ ತುರುಕಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆಂದು ನೀರಜ್‌ ಪೊಲೀಸರಿಗೆ ಮಾಹಿತಿ ನೀಡಿದ್ದ. ಹಾಗೂ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಿ ಹೇಳಿದ್ದ.

ಇದನ್ನೂ ಓದಿ : Ayodhya : ಮುಂದಿನ ವಾರ ನಡೆಯಬೇಕಿದ್ದ ಅಯೋಧ್ಯಾ ರಾಮಲಲ್ಲಾ ಮೆರವಣಿಗೆ ದಿಢೀರ್ ರದ್ದು !!

ಆದರೆ ಪೊಲೀಸರು ಈತನ ಮಾತನ್ನು ನಂಬದೇ ತನಿಖೆ ನಡೆಸಿದಗ ತೀವ್ರ ವಿಚಾರಣೆಯ ವೇಳೆ ಘಟನೆಯ ಕುರಿತು ಸತ್ಯ ಬಾಯಿ ಬಿಟ್ಟಿದ್ದಾನೆ.

ವಿಚಾರಣೆ ಸಂದರ್ಭ ಈತ ನನ್ನ ಹೆಂಡತಿ (22 ವರ್ಷ) ಸುಂದರವಾಗಿದ್ದು, ಆಕೆ ಇಡೀ ದಿನ ರೀಲ್ಸ್‌ ಮಾಡುತ್ತಿದ್ದಳು. ಸೋಶಿಯಲ್‌ ಮೀಡಿಯಾದಲ್ಲಿ ಹಲವು ವ್ಯಕ್ತಿಗಳ ಜೊತೆ ಮಾತನಾಡುತ್ತಿದ್ದಳು. ಹಾಗಾಗಿ ಇದರಿಂದ ಬೇಸತ್ತ ನಾನು ಆಕೆಯನ್ನು ಬಿಡುವ ಯೋಚನೆ ಮಾಡಿದ್ದೆ. ಈಕೆಯನ್ನು ಬಿಟ್ಟು ಅತ್ತಿಗೆಯನ್ನು ಮದುವೆ ಆಗುವವನಿದ್ದೆ. ಆದರೆ ಇದಕ್ಕೆ ಪತ್ನಿ ಒಪ್ಪಿಗೆ ನೀಡಿಲ್ಲ. ಹಾಗಾಗಿ ಆಕೆ ಹಾಗೂ ಮಗಳಿಗೆ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಬಾಯಿ ಬಿಟ್ಟಿದ್ದಾನೆ.

ದರೋಡೆ ಎಂದು ಸಾಬೀತು ಮಾಡಲು ನಾನೇ ಈ ತರಹ ನಾಟಕ ಮಾಡಿದ್ದು, ನಂತರ ನಕಲಿ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

You may also like

Leave a Comment