Home » Kukke Subrahmanya: ಕುಕ್ಕೇ ದೇಗುಲಕ್ಕೆ ಆಗಮಿಸಿದ್ದ ಭಕ್ತರ ಪರ್ಸ್ ಕಳ್ಳತನ!! ಸಮಯಪ್ರಜ್ಞೆ ಮೆರೆದ ಭದ್ರತಾ ಸಿಬ್ಬಂದಿ ಗಂಗಾಧರ -ಮಹಿಳೆ ಪೊಲೀಸರ ವಶಕ್ಕೆ

Kukke Subrahmanya: ಕುಕ್ಕೇ ದೇಗುಲಕ್ಕೆ ಆಗಮಿಸಿದ್ದ ಭಕ್ತರ ಪರ್ಸ್ ಕಳ್ಳತನ!! ಸಮಯಪ್ರಜ್ಞೆ ಮೆರೆದ ಭದ್ರತಾ ಸಿಬ್ಬಂದಿ ಗಂಗಾಧರ -ಮಹಿಳೆ ಪೊಲೀಸರ ವಶಕ್ಕೆ

1 comment
Kukke Subrahmanya

 

ಕುಕ್ಕೇ ಸುಬ್ರಹ್ಮಣ್ಯ: ದಕ್ಷಿಣ ಭಾರತದ ಅತೀ ಹೆಚ್ಚು ಆದಾಯ ಹಾಗೂ ನಾಗಾರಾಧನೆಯ ಪುಣ್ಯ ಕ್ಷೇತ್ರವಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಗೆ ಪ್ರತೀ ನಿತ್ಯವೂ ಊರು-ಪರವೂರಿನಿಂದ ಭಕ್ತಿಯಿಂದ ಪ್ರವಾಸಿಗರು, ಭಕ್ತರು ಬರುತ್ತಾರೆ.ಪುರಾತನ ಕಾರ್ಣಿಕ, ನಾಗಾರಾಧನೆ, ಸರ್ಪ ಸಂಸ್ಕಾರ ಸೇವೆಯಿಂದ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇರುವ ಮಧ್ಯೆ ಜೇಬು ಕಳ್ಳರ,ಮೊಬೈಲ್ ಕಳ್ಳರ ಹಾವಳಿಯೂ ಸ್ಥಾನ ಪಡೆದಿದೆ.

ದೇವಾಲಯಕ್ಕೆ ಆಗಮಿಸುವ ಭಕ್ತರ ಚಲನವಲನಗಳನ್ನೇ ದಿಟ್ಟುಸುವ ಕಳ್ಳರು ಅವಕಾಶ ಸಿಕ್ಕಕೂಡಲೇ ಬಾಚಿಕೊಂಡು ಪರಾರಿಯಾಗುವ ಬಗ್ಗೆ ಸುದ್ದಿಯಾಗಿರುವ ಬೆನ್ನಲ್ಲೇ ಒಂದೇ ವಾರದಲ್ಲಿ ಇಬ್ಬರು ಜೇಬುಕಳ್ಳರನ್ನು ದೇವಾಲಯದ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಬಗ್ಗೆ ವರದಿಯಾಗಿದೆ.

ಒಂದೆರಡು ದಿನಗಳ ಹಿಂದಷ್ಟೇ ದೂರದ ಊರಿನಿಂದ ಬಂದಿದ್ದ ಭಕ್ತರೊಬ್ಬರು ತನ್ನ ಮೊಬೈಲ್ ಹಾಗೂ ಪರ್ಸ್ ಕಳೆದುಕೊಂಡಿರುವ ಬಗ್ಗೆ ದೇವಾಲಯದ ಕಚೇರಿಯಲ್ಲಿ ವಿಚಾರ ತಿಳಿಸಿದರು. ಕೂಡಲೇ ಕಚೇರಿ ಸಿಬ್ಬಂದಿ ಎಲ್ಲಾ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಪರ್ಸ್ ಎಗರಿಸುವ ದೃಶ್ಯ ಕಂಡುಬಂದಿತ್ತು.ತಕ್ಷಣ ಕಾರ್ಯಪ್ರವೃತ್ತರಾದ ದೇವಾಲಯದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದು
,ಅದಾಗಲೇ ಮಹಿಳೆ ಬಸ್ಸು ನಿಲ್ದಾಣಕ್ಕೆ ಆಗಮಿಸಿ ಬಸ್ಸು ಏರಿದ್ದಳು. ಬಳಿಕ ಆಕೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.

ಇದನ್ನು ಓದಿ: Hit and run new law: ವಾಹನ ಸವಾರರೇ ಎಚ್ಚರ, ಎಚ್ಚರ !! ಈ ತಪ್ಪು ಮಾಡಿದ್ರೆ 10 ವರ್ಷ ಜೈಲು, ₹ 7 ಲಕ್ಷ ದಂಡ ಫಿಕ್ಸ್ !!

ಸದ್ಯ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿಯವರ ಸಮಯ ಪ್ರಜ್ಞೆಯಿಂದ ಹಲವಾರು ಅಗತ್ಯ ದಾಖಲೆಗಳಿದ್ದ ಪರ್ಸ್ ಮರಳಿ ಸಿಕ್ಕ ಖುಷಿಯಲ್ಲಿ ಭಕ್ತಾದಿಗಳು ಅಭಿನಂದಿಸಿದರು.ಪ್ರಸಿದ್ಧ ದೇವಾಲಯದಲ್ಲಿ ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಭದ್ರತಾ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

You may also like

Leave a Comment