Home » Crime News: ಮನೆಗೆ ಪ್ರಿಯಕರನನ್ನು ಕರೆಯಿಸಿ, ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಯುವತಿ

Crime News: ಮನೆಗೆ ಪ್ರಿಯಕರನನ್ನು ಕರೆಯಿಸಿ, ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಯುವತಿ

0 comments

Crime News: ಯುವತಿಯೋರ್ವಳು ಪ್ರಿಯಕರನನ್ನು ತನ್ನ ಮನೆಗೆ ಕರೆದು ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದಿರುವ ಘಟನೆಯೊಂದು ನಡೆದಿದೆ. ಪ್ರಿಯಕರ ಅನಿಲ್‌ ಗೊಂಡ್‌ (25) ಎಂಬಾತನೇ ಸಂತ್ರಸ್ತ ಯುವಕ. ಈ ಘಟನೆ ನಡೆದಿರುವುದು ಬಿಹಾರದ ಬಕ್ಸರ್‌ ಜಿಲ್ಲೆಯಲ್ಲಿ.

ಮನೆಗೆ ಬರಲು ಪ್ರಿಯಕರನಿಗೆ ಹೇಳಿದ ಪ್ರಿಯತಮೆ. ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ನಂತರ ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದಿದ್ದಾಳೆ. ಪ್ರಿಯಕರ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆತನನ್ನು ನೋಡಿದ ಪ್ರಿಯತಮೆ ಆತ ಸತ್ತು ಹೋಗಿದ್ದಾನೆ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಸ್ಥಳೀಯರ ಸಹಾಯದಿಂದ ಪ್ರಿಯಕರ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಈ ವಿಚಾರ ಕುಟುಂಬಸ್ಥರಿಗೆ ತಿಳಿದು, ಪೊಲೀಸರಿಗೆ ತಿಳಿಸಿದ್ದಾರೆ.

ಅನಿಲ್‌ ತನ್ನ ಪ್ರಿಯತಮೆಯ ಮನೆಗೆ ಕರೆದ ನಂತರ, ದುಮ್ರಾನ್‌ನಲ್ಲಿರುವ ಮನೆಗೆ ಹೋಗಿದ್ದ. ಈ ವೇಳೆ ಈ ಘಟನೆ ನಡೆದಿದೆ ಎಂದು ಸಹೋದರ ಪ್ರಮೋದ್‌ ಕುಮಾರ್‌ ಹೇಳಿದ್ದಾರೆ. ಅನಿಲ್‌ ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ. ಕೃತ್ಯದ ಹಿಂದಿನ ಕಾರಣವೇನು ಎಂಬುವುದರ ಕುರಿತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment