Home » Cyber Crime: ನೀವೇನಾದರೂ ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಹಣ ಮಾಯ ಖಂಡಿತ!!!

Cyber Crime: ನೀವೇನಾದರೂ ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಹಣ ಮಾಯ ಖಂಡಿತ!!!

0 comments
Cyber crime

Cyber Crime: ಇತ್ತೀಚೆಗೆ ಸೈಬರ್​ ವಂಚನೆ (Cyber Crime)ಯ ಪ್ರಕರಣಗಳು ಹೆಚ್ಚಾಗಿವೆ. ವಂಚಕರು ಎಲ್ಲಾ ರೀತಿಯಲ್ಲೂ ಹಣ ಕಬಳಿಸಲು ಸಂಚು ಹೂಡುತ್ತಿದ್ದಾರೆ. ಅದಕ್ಕೆಂದೇ ಸೋಷಿಯಲ್ ಮೀಡಿಯಾವನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯಲ್ಲಿ ಜನರಿಗೆ ಮೋಸಮಾಡಿ, ಹಣ(money) ಕಬಳಿಸುತ್ತಿದ್ದಾರೆ. ಇನ್ನು ಬ್ಯಾಂಕ್(bank) ಹೆಸರಿನಲ್ಲಿ ವಂಚಿಸುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಹ್ಯಾಕರ್ ಗಳು ಜನಸಾಮಾನ್ಯರಿಂದ ಹಣ ದೋಚಲು ಫಿಶಿಂಗ್ ಎಸ್​ಎಮ್​ಎಸ್​(sms) ಮಾಡುತ್ತಾರೆ. ಈ ರೀತಿ ಜನರನ್ನು ವಂಚಿಸಿ, ಅವರ ಖಾತೆಯಿಂದ ಲಕ್ಷಾಂತರ ಹಣ ಖಾಲಿ ಮಾಡುತ್ತಾರೆ.

ಈ ಫಿಶಿಂಗ್ SMS ವಂಚನೆಗಳ ಬಗ್ಗೆ ಎಚ್‌ಡಿಎಫ್‌ಸಿ(HDFC) ಸೇರಿದಂತೆ ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ಈ ಬಗ್ಗೆ ಸಂಘಮಿತ್ರ ಮಜುಂದಾರ್ ಎಂಬವರು, ಟ್ವಿಟರ್‌(Twitter) ನಲ್ಲಿ ತಮಗೆ ಬಂದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಮೆಸೇಜ್ ನಲ್ಲಿ, HDFC ಗ್ರಾಹಕ ನಿಮ್ಮ HDFC NET ಬ್ಯಾಂಕಿಂಗ್ ಅನ್ನು ಇಂದು ಸ್ಥಗಿತಗೊಳಿಸಲಾಗುವುದು. ದಯವಿಟ್ಟು ನಿಮ್ಮ ಪ್ಯಾನ್ ಕಾರ್ಡ್(pan card) ಅನ್ನು ಅಪ್ಡೇಟ್​ ಮಾಡಿ. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಎಂದು ಬರೆಯಲಾಗಿದೆ.

HDFC Bankcare ಫಿಶಿಂಗ್ ಹಗರಣದ ಸಂಬಂಧಿಸಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, PAN ಕಾರ್ಡ್ ಅಥವಾ KYC ಅಪ್ಡೇಟ್​​ ಮಾಡಲು ಲಿಂಕ್ ಕ್ಲಿಕ್ ಮಾಡಿ ಎಂದು ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸಬೇಡಿ, ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಖಾತೆಯ ಮಾಹಿತಿಯನ್ನು ನೀಡಬೇಡಿ ಎಂದು ಹೇಳಿದ್ದಾರೆ. ಅಲ್ಲದೆ, HDFC ಬ್ಯಾಂಕ್ ಯಾವಾಗಲೂ ತಮ್ಮ ಅಧಿಕೃತ ID hdfcbk/ hdfcbn ನಿಂದ ಸಂದೇಶಗಳನ್ನು ಕಳುಹಿಸುತ್ತದೆ ಎಂದು ಹೇಳಿದ್ದಾರೆ.

ಬ್ಯಾಂಕ್ ಕಳುಹಿಸುವ ಸಂದೇಶಗಳಲ್ಲಿನ ಲಿಂಕ್‌ಗಳು ಯಾವಾಗಲೂ http://hdfcbk.io ಅಡಿಯಲ್ಲಿ ಇರುತ್ತವೆ. ಹಾಗೇ ಬ್ಯಾಂಕ್ ಪ್ಯಾನ್ ವಿವರಗಳು, OTP, UPI, VPA / MPIN, ಗ್ರಾಹಕ ID ಮತ್ತು ಪಾಸ್‌ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಗಳನ್ನು ಕೇಳುವುದಿಲ್ಲ. ಇಂತಹ ಖಾತೆಯ ಮಾಹಿತಿಯನ್ನು ಯಾರಿಗೂ ನೀಡಬೇಡಿ ಎಂದು ಎಮದು ಬ್ಯಾಂಕ್ ನಿರ್ವಾಹಕರು ಹೇಳಿದ್ದಾರೆ.

ಸ್ಕ್ಯಾಮರ್ ಗಳು, ಖಾತೆ ವಿವರಗಳು, ಓಟಿಪಿಗಳನ್ನು ಕೇಳುತ್ತಾರೆ.
ಹಾಗೇ ನಿಮ್ಮ ಕೆವೈಸಿ(KYC), ಪ್ಯಾನ್​ ಅಪ್ಡೇಟ್​ ಮಾಡಿ ಇಲ್ಲವಾದ್ರೆ ಬ್ಯಾಂಕ್ ಖಾತೆ ಬ್ಯಾನ್​ ಆಗುತ್ತದೆ. ಅದಕ್ಕಾಗಿ ಒಂದು ಲಿಂಕ್​ ಕ್ಲಿಕ್ ಮಾಡಿ ಎಂದೆಲ್ಲಾ ಮೆಸೇಜ್ ಕಳುಹಿಸುತ್ತಾರೆ. ಇದನ್ನು ನಂಬಿ, ಆ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಖಾತೆಯ ಹಣ‌ ಖಾಲಿ ಆಗುವುದು ಖಂಡಿತ!!.

ಈ ವಂಚನೆಯಿಂದ ತಪ್ಪಿಸಿಕೊಳ್ಳಲು, ಒಟಿಪಿ, ಬ್ಯಾಂಕ್ ವಿವರಗಳು, ಮೊಬೈಲ್ ಸಂಖ್ಯೆ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಎಸ್‌ಎಂಎಸ್‌ನಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ. ಹಾಗೇ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಫೋನ್‌ಗಳಿಗೆ ಬಲವಾದ, ಕ್ಲಿಷ್ಟಕರವಾದ ಪಾಸ್‌ವರ್ಡ್‌ಗಳನ್ನು ಬಳಸಿ. ಅಲ್ಲದೆ, ಪಾಸ್​ವರ್ಡ್​​ಗಳನ್ನು ಆಗಾಗ ಬದಲಾಯಿಸಿ. ಲಿಂಕ್ ಗಳ ಮಾಹಿತಿ ತಿಳಿದುಕೊಳ್ಳದೆ ಕ್ಲಿಕ್ ಮಾಡಬೇಡಿ.

You may also like

Leave a Comment