Home » Dakshina Kannada: ಅಕ್ರಮ ಮರಳುದಂಧೆ, ಪೊಲೀಸ್ ದಾಳಿ!

Dakshina Kannada: ಅಕ್ರಮ ಮರಳುದಂಧೆ, ಪೊಲೀಸ್ ದಾಳಿ!

0 comments

Belthangady: ಅಕ್ರಮ ಮರಳು ಮಾಫಿಯಾಗಳ ಮೇಲೆ ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸರ ತಂಡ ಪ್ರಕರಣ ದಾಖಲು ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕುದ್ರಾಯದ ನೆರಿಯ ಹೊಳೆಯಲ್ಲಿ ಅಕ್ರಮವಾಗಿ ಪಿಕಪ್‌ ವಾಹನಕ್ಕೆ ಮರಳು ತುಂಬಿಸುತ್ತಿದ್ದಾಗ ದಾಳಿ ಮಾಡಿ ಪಿಕಪ್‌ ಮತ್ತು ಮರಳು ವಶಪಡಿಸಿಕೊಂಡು ಆರೋಪಿಯ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

ಡಿ.28 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಅಕ್ರಮವಾಗಿ ಪಿಕಪ್‌ ವಾಹನದಲ್ಲಿ ಮರಳನ್ನು ಕಳ್ಳತನದಿಂದ ತುಂಬಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್‌ ನವರು ದಾಳಿ ಮಾಡಿ ಪಿಕಪ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಆರೋಪಿ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕೆರೆಕೋಡಿ ನಿವಾಸಿ ನಾರಾಯಣ ಸಪಲ್ಯ ಮಗ ಮಂಜು (32) ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

 

You may also like

Leave a Comment