Home » Crime News: ಕರಾವಳಿಗರೇ ಎಚ್ಚರ; ಆಕ್ಟಿವ್‌ ಆಗಿದೆ ಮೈಗೆ ಎಣ್ಣೆ, ಗ್ರೀಸ್‌ ಹಚ್ಚಿ ಬರ್ತಿದೆ ನಟೋರಿಯಸ್‌ ಕಳ್ಳರ ಗ್ಯಾಂಗ್‌!!!

Crime News: ಕರಾವಳಿಗರೇ ಎಚ್ಚರ; ಆಕ್ಟಿವ್‌ ಆಗಿದೆ ಮೈಗೆ ಎಣ್ಣೆ, ಗ್ರೀಸ್‌ ಹಚ್ಚಿ ಬರ್ತಿದೆ ನಟೋರಿಯಸ್‌ ಕಳ್ಳರ ಗ್ಯಾಂಗ್‌!!!

1 comment
Crime News

Udupi: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳ್ಳರ ಗ್ಯಾಂಗ್‌ವೊಂದು ತಮ್ಮ ಕೈಚಳಕ ಪ್ರದರ್ಶನದಲ್ಲಿ ತೊಡಗಿದೆ. ಮೈಗೆ ಎಣ್ಣೆ, ಗ್ರೀಸ್‌ ಹಚ್ಚಿಕೊಂಡು ಬರುವ ಈ ತಂಡ ಹಣ ದೋಚಿ ಪರಾರಿಯಾಗುತ್ತದೆ. ಉತ್ತರ ಭಾರತದ ಕಳ್ಳರ ಗ್ಯಾಂಗ್‌ ಈ ದಂಧೆಯಲ್ಲಿ ತೊಡಗಿದ್ದು, ದುಡ್ಡು ಲಪಟಾಯಿಸಿ ಪರಾರಿಯಾಗುತ್ತಿದೆ ಎಂದು ವರದಿಯಾಗಿದೆ.

ಉಡುಪಿಯ ಸಂತೆಕಟ್ಟೆಯಲ್ಲಿ ಇರುವ ಬೇಕರಿಯೊಂದರಲ್ಲಿ ಕಳ್ಳತನ ಮಾಡಲು ಬಂದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳರು ಚಡ್ಡಿಯನ್ನು ಹಾಕಿ, ಮೈ ತುಂಬಾ ಎಣ್ಣೆ ಹಚ್ಚಿಕೊಂಡಿರೋ ದೃಶ್ಯ ಲಭ್ಯವಾಗಿದೆ. ಇದನ್ನು ನೋಡಿದಾಗ ಉಡುಪಿಯಲ್ಲಿ ಕಳ್ಳರ ಗ್ಯಾಂಗ್‌ ಸಕ್ರಿಯವಾಗಿದೆ ಎಂದು ಹೇಳಬಹುದು.

ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಕಳ್ಳತನಕ್ಕೆ ಇಳಿಯುವ ಈ ತಂಡ, ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿಯನ್ನು ಬಿಟ್ಟು ಮನೆಯವರ ಚಪ್ಪಲಿ ಧರಿಸಿ ಹೋಗಿದೆ ಎಂದು ಹೇಳಲಾಗಿದೆ.

ಈ ಕಳ್ಳರ ಗ್ಯಾಂಗ್‌ ಮನೆಮಂದಿ ನಿದ್ದೆಯ ಸಮಯದಲ್ಲಿದ್ದಾಗ ಬಾಗಿಲು ಒಡೆದು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ದೇವರ ಚಿನ್ನ ಬೆಳ್ಳಿ ಕದ್ದಿದ್ದಾರೆ. ಆದರೆ ದ್ವಿಚಕ್ರ ವಾಹನ ಕಳವು ಪ್ರಕರಣ ಭೇದಿಸಲು ಹೋದಾಗ ಪ್ರಕರಣಕ್ಕೊಂದು ರೋಚಕ ತಿರುವು ದೊರಕಿದೆ. ಅಲ್ಲಿ ಕದ್ದ ವಾಹನ ಈ ಸಂತೆಕಟ್ಟೆಯಲ್ಲಿ ಸಿಕ್ಕ ವಾಹನ ಒಂದೇ ಆಗಿದೆ ಎಂದು ವರದಿಯಾಗಿದೆ. ಈ ಗ್ಯಾಂಗ್‌ ಯೇ ಮನೆಯಲ್ಲಿಯೇ ಚಿನ್ನಾಭರಣ ಕದ್ದಿದೆ ಎಂದು ಹೇಳಲಾಗಿದೆ.

ಇದನ್ನು ಓದಿ: School holiday: ಶಾಲೆಗಳಿಗೆ 21 ದಿನ ರಜೆ ಘೋಷಣೆ !!

ಅವರು ಯಾವುದಾದರೂ ಗ್ಯಾಂಗ್‌ನಲ್ಲಿದ್ದಾರೋ, ಇಲ್ಲವೋ ಎಂಬುವುದನ್ನು ಪರಿಶೀಲನೆ ಮಾಡಲಿದ್ದೇವೆ. ಸಿಸಿಟಿವಿ ದೃಶ್ಯದ ಪ್ರಕಾರ ಗ್ಯಾಂಗ್‌ ಮೈಗೆ ಏನೋ ಹಚ್ಚಿಕೊಂಡು ಮನೆಗೆ ಎಂಟ್ರಿ ನೀಡಿದೆ. ಆದರೆ ಏನು ಹಚ್ಚಿರುವುದು ಎಂಬುವುದರ ಕುರಿತು ಗೊತ್ತಿಲ್ಲ ಎಂದು ಡಾ.ಅರುಣ್‌ ಕೆ, ಉಡುಪಿ ಎಸ್‌ಪಿ ಹೇಳಿದ್ದಾರೆಂದು ವರದಿಯಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದ್ದು, ಇನ್ನು ಈ ನಟೋರಿಯಸ್‌ ಗ್ಯಾಂಗ್‌ನಿಂದ ಆತಂಕಗೊಂಡ ಜನ ಹೆಚ್ಚಿನ ಭದ್ರತೆ, ಪೊಲೀಸ್‌ ಗಸ್ತು ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

You may also like

Leave a Comment