Home » Nalin Kumar Kateel: ನಳಿನ್‌ ಕುಮಾರ್‌ ಕಟೀಲ್‌ ಗೆ ಟಿಕೆಟ್‌ ಕೈ ತಪ್ಪಿದ್ದು ಹೇಗೆ? ದೈವ ಎಚ್ಚರಿಕೆ ನುಡಿ ನೀಡಿತ್ತೇ?

Nalin Kumar Kateel: ನಳಿನ್‌ ಕುಮಾರ್‌ ಕಟೀಲ್‌ ಗೆ ಟಿಕೆಟ್‌ ಕೈ ತಪ್ಪಿದ್ದು ಹೇಗೆ? ದೈವ ಎಚ್ಚರಿಕೆ ನುಡಿ ನೀಡಿತ್ತೇ?

32 comments

Nalin Kumar Kateel: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್‌ ಈ ಬಾರಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ತಪ್ಪಿದೆ. ಬಿಜೆಪಿ ಹೈಕಮಾಂಡ್‌ ಅವರು ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಿದ್ದು, ಬೃಜೇಶ್‌ ಚೌಟ ಅವರಿಗೆ ಟಿಕೆಟ್‌ ಸಿಕ್ಕಿದೆ. ಈ ಕುರಿತು ನಳಿನ್‌ ಕುಮಾರ್‌ ಕಟೀಲ್‌ ಅವರು ಚೌಟ ಅವರಿಗೆ ತಾವು ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದ್ದಾರೆ.

ಇದನ್ನು ಓದಿ: Shobha Karandlaje: ಟಿಕೆಟ್‌ ಸಿಕ್ಕ ಕ್ಷೇತ್ರದ ಹಾಲಿ ಸಂಸದ ಡಿವಿಎಸ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶೋಭಕ್ಕ

ಆದರೆ ಈಗ ಹರಿದಾಡುತ್ತಿರುವ ಸುದ್ದಿ ಏನೆಂದರೆ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಈ ಮೊದಲೇ ಟಿಕೆಟ್‌ ಕೈ ತಪ್ಪುವ ಬಗ್ಗೆ ದೈವ ಎಚ್ಚರಿಕೆ ನೀಡಿತ್ತು ಎಂಬ ವೀಡಿಯೋವೊಂದು ವೈರಲ್‌ ಆಗಿದೆ.

ಸುಳ್ಯದ ಅಜ್ಜಾವರ ಗ್ರಾಮದ ನೇಮವೊಂದರಲ್ಲಿ ದೈವ ಎಚ್ಚರಿಕೆ ನುಡಿ ನೀಡಿತ್ತು ಎಂಬ ವೀಡಿಯೋ ವೈರಲ್‌ ಆಗಿದೆ. ಅಜ್ಜಾವರ ಗ್ರಾಮದ ಮೇನಾಲದಲ್ಲಿ ನಡೆದಿದ್ದ ವಯನಾಟ್‌ ಕುಲವನ್‌ ದೈವದ ನೇಮೋತ್ಸವದಲ್ಲಿ ವಿಷ್ಣುಮೂರ್ತಿ ದೈವ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ನುಡಿ ನೀಡಿತ್ತು.

ಕುರುಕ್ಷೇತ್ರದಲ್ಲಿ ಸಹೋದರರೇ ಶತ್ರುಗಳಾಗಿದ್ದು, ನಿನ್ನ ಜೊತೆಗಿರುವವರೇ ನಿನಗೆ ವೈರಿಗಳಾಗಿದ್ದಾರೆ. ತುಂಬಾ ಜನರು ನಿನಗೆ ವೈರಿಗಳಗಿದ್ದರೂ ಕೊನೆಗೆ ಸತ್ಯ ಧರ್ಮ ಮಾತ್ರ ಗೆಲ್ಲುತ್ತದೆ. ಯಾವುದಕ್ಕೂ ಕುಗ್ಗದೆ ಮುಂದೆ ಸಾಗು ಮುಂದೊಂದು ದಿನ ಜಯ ಸಿಗಲಿದೆ ಎಂದು ಹೇಳಿತ್ತು. ಈ ವೀಡಿಯೋ ಈಗ ವೈರಲ್‌ ಆಗಿದ್ದು, ದೈವ ನುಡಿಯಂತೆ ನಳಿನ್‌ ಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿಸಲು ಅವರ ಜೊತೆಗಿದ್ದವರೇ ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

You may also like

Leave a Comment