Home » Mangaluru: ನಟೋರಿಯಸ್‌ ರೌಡಿ ಮೇಲೆ ಫೈರ್‌ ಮಾಡಿದ ಮಂಗಳೂರು ಪೊಲೀಸರು!!

Mangaluru: ನಟೋರಿಯಸ್‌ ರೌಡಿ ಮೇಲೆ ಫೈರ್‌ ಮಾಡಿದ ಮಂಗಳೂರು ಪೊಲೀಸರು!!

0 comments

ಮಂಗಳೂರು: ನಟೋರಿಯಸ್‌ ರೌಡಿ ಆಕಾಶಭವನ ಶರಣ್‌ನ ಕಾಲಿಗೆ ಮಂಗಳವಾರ ಪೊಲೀಸರು ಗುಂಡು ಹಾರಿಸಿರುವ ಕುರಿತು ವರದಿಯಾಗಿದೆ. ಪರಾರಿಯಾಗಲು ಯತ್ನ ಮಾಡಿದಾಗ ಫೈರಿಂಗ್‌ ಮಾಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಆಕಾಶ ಭವನ ಶರಣ್‌ ಉಡುಪಿಯಲ್ಲಿದ್ದ ಮಾಹಿತಿ ಮೇರೆಗೆ ಇಂದು ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದಾಗ ಫಾಲೋ ಮಾಡಿದ್ದರು. ಪಂಪ್‌ವೆಲ್‌ನಿಂದ ಮುಂದಕ್ಕೆ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಜಪ್ಪು ಕುತ್ಪಾಡಿ ಬಳಿ ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿರುವುದಾಗಿ ವರದಿಯಾಗಿದೆ.

You may also like

Leave a Comment