Home » ಪುತ್ತೂರು: ಮೋದಿ ಸ್ಕೀಮ್‌ನಲ್ಲಿ ನಿಮಗೆ ಹಣ ಬಂದಿದೆ ಎಂದು ಅಮಾಯಕರಿಂದ ಚಿನ್ನ ,ಹಣ ಪಡೆದು ವಂಚಿಸುತ್ತಿದ್ದಾತ ಪೊಲೀಸ್ ಬಲೆಗೆ

ಪುತ್ತೂರು: ಮೋದಿ ಸ್ಕೀಮ್‌ನಲ್ಲಿ ನಿಮಗೆ ಹಣ ಬಂದಿದೆ ಎಂದು ಅಮಾಯಕರಿಂದ ಚಿನ್ನ ,ಹಣ ಪಡೆದು ವಂಚಿಸುತ್ತಿದ್ದಾತ ಪೊಲೀಸ್ ಬಲೆಗೆ

by Praveen Chennavara
0 comments

 

ಪುತ್ತೂರು :ಮೋದಿ ಸ್ಕೀಮ್‌ನಲ್ಲಿ ನಿಮಗೆ ಹಣ ಬಂದಿದೆ ಎಂದು ಅಮಾಯಕರಿಂದ ಚಿನ್ನ ,ಹಣ ಪಡೆದು ವಂಚಿಸುತ್ತಿದ್ದಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಈತ ಉಪ್ಪಿನಂಗಡಿ ಸಹಿತ ಹಲವು ಕಡೆ ಜನರಿಗೆ ಪಂಗನಾಮ ಹಾಕಿ ಹಣ, ಚಿನ್ನದ ಸರಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ.

ಮೂಲತಃ ಕಾಸರಗೋಡಿನವನಾಗಿದ್ದು, ಉಪ್ಪಿನಂಗಡಿಯಲ್ಲಿ ಈ ಹಿಂದೆ ರಸ್ತೆ ಬದಿ ಬನಿಯನ್, ಟೀ ಶರ್ಟ್ ಮಾರುತ್ತಿದ್ದ ಎನ್ನಲಾಗಿದೆ.

ಈತ ಉಪ್ಪಿನಂಗಡಿಯಲ್ಲಿ ಹಲವು ಮಂದಿಯನ್ನು ನಿಮಗೆ ಮೋದಿಯ ಹಣ ತೆಗೆದುಕೊಡುತ್ತೇನೆಂದು ಮಾತಿನಲ್ಲಿ ಮೋಡಿ ಮಾಡಿ ಹಣ,ಚಿನ್ನದ ಸರಗಳನ್ನು ಅವರಿಂದಲೇ ಪಡೆದು ಬಳಿಕ ಪರಾರಿಯಾಗುತ್ತಿದ್ದ. ಈತನ ಮಾತಿಗೆ ಕಿವಿಕೊಟ್ಟು ಪ್ರತ್ಯುತ್ತರ ನೀಡಿದವರಿಗೆ ಸುಮಾರು 5ನಿಮಿಷ ಕಾಲ ನಾವು ಎಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರುತ್ತಿರಲಿಲ್ಲ.ಹಾಗಾಗಿ ಅನೇಕ ಜನ ಹಣ, ಸರ ಕಳೆದುಕೊಳ್ಳುತ್ತಿದ್ದರು.

ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದು ,ಇನ್ನಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ.

You may also like

Leave a Comment