Home » Tiger Dance: ಹುಲಿ ವೇಷಧಾರಿಗೆ ದೈವ ಆವಾಹನೆ!

Tiger Dance: ಹುಲಿ ವೇಷಧಾರಿಗೆ ದೈವ ಆವಾಹನೆ!

by Mallika
0 comments

Dakshina Kannada: ತುಳುನಾಡು ಎಂದರೆ ದೈವಗಳ ನಾಡು. ಇಲ್ಲಿ ಕೊರಗಜ್ಜನನ್ನು ನಂಬದವರು ಯಾರೂ ಇಲ್ಲ. ಏಕೆಂದರೆ ಕೊರಗಜ್ಜನ ಪವಾಡ ಅನೇಕ, ಅಪಾರ. ಅಂತಹ ದೈವ ನಂಬಿಕೆ ಇರುವಂತಹ ಈ ನಾಡಲ್ಲಿ ಜನ ದೈವವನ್ನು ಬಹಳ ನಂಬಿಕೆಯಿಂದ ಭಕ್ತಿಯಿಂದ ಆಚರಿಸಿಕೊಂಡು, ದೈವ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆನೇ ಕೆಲವೊಮ್ಮೆ ಇಲ್ಲಿ ಅಚ್ಚರಿಯ ಘಟನೆಗಳು ಕೂಡಾ ನಡೆಯುತ್ತದೆ.

ಮಂಗಳೂರಿನ ಬೊಕ್ಕಪಟ್ನದಲ್ಲಿ ಶಿವ ಫ್ರೆಂಡ್ಸ್‌ನ ಹುಲಿ ವೇಷದ ಊದು ಹಾಕೋ ಕಾರ್ಯಕ್ರಮದಲ್ಲಿ ಹುಲಿ ವೇಷ ಹಾಕೋ ಮೊದಲು ದೇವರ ಆರಾಧನೆ ನೆಡಯುತ್ತದೆ. ಈ ಸಮಯದಲ್ಲಿ ಹುಲಿ ವೇಷ ಹಾಕಲು ತಯಾರಾಗಿದ್ದ ವೇಷಧಾರಿಯೊಬ್ಬರಿಗೆ ದೈವ ಆವಾಹನೆಯಾಗಿದೆ. ಇದು ನಟ ರಾಜ್‌ ಬಿ ಶೆಟ್ಟಿ ಸಮ್ಮುಖದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ. ದೈವ ಆವಾಹನೆಯಾಗಿರುವುದನ್ನು ಕಂಡ ಹಿರಿಯಲು ಕೂಡಲೇ ದೈವಕ್ಕೆ ಸಾಂತ್ವನ ಮಾಡಿದ್ದಾರೆ. ಬಳಿ ಹುಲಿ ವೇಷಧಾರಿ ಸಹಜ ಸ್ಥಿತಿಗೆ ಮರಳಿದ್ದಾನೆ.

You may also like

Leave a Comment