Home » U T khadar: ಮಂಗಳೂರು ವಿವಿ ಗಣೇಶೋತ್ಸವ ವಿರೋಧ ಪ್ರಕರಣ- ಭಾರೀ ಮೆಚ್ಚುಗೆ ಪಾತ್ರವಾದ ಸ್ಪೀಕರ್ ಯು.ಟಿ ಖಾದರ್ ನಡೆ

U T khadar: ಮಂಗಳೂರು ವಿವಿ ಗಣೇಶೋತ್ಸವ ವಿರೋಧ ಪ್ರಕರಣ- ಭಾರೀ ಮೆಚ್ಚುಗೆ ಪಾತ್ರವಾದ ಸ್ಪೀಕರ್ ಯು.ಟಿ ಖಾದರ್ ನಡೆ

4 comments

U T khadar: ಮಂಗಳೂರು ವಿವಿಯ(Manglore university) ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಉಪಕುಲಪತಿ ಅನುಮತಿ ವಿಚಾರ ಸಂಬಂಧಿಸಿ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಈ ಕುರಿತು ಮಹತ್ವದ ಬೆಳವಣಿಗೆಗಳಾಗಿದ್ದು ಗಣೇಶೋತ್ಸವ ಆಚರಣೆಯ ವಿಚಾರ ನಾನಾ ಕಾರಣಗಳಿಂದ ಕಾವೇರುತ್ತಿದ್ದು, ಈ ಘಟನೆಯಿಂದ ನೊಂದು ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಕುಲಪತಿಗಳು ಸರಕಾರಕ್ಕೆ ಪತ್ರ ಮೂಲಕ ಮನವಿ ಮಾಡಿದ್ದಾರೆ. ಆದರೆ ಈ ನಡುವಿ ಈ ವಿಚಾರವಾಗಿ ಮಂಗಳೂರಿನ ಸ್ಥಳೀಯ ಶಾಸಕರು ಹಾಗೂ ವಿಧಾನಸಭಾ ಸ್ಪೀಕರ್ ಆದ ಯು. ಟಿ ಖಾದರ್(U T khadar) ಅವರು ಭಾರೀ ಮೆಚ್ಟುಗೆಗೆ ಪಾತ್ರವಾಗಿದೆ.

ಹೌದು, ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಖಾದರ್ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗಣೇಶೋತ್ಸವ(Ganeshotsava) ಆಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಅಲ್ಲಿ ವಿದ್ಯಾರ್ಥಿಗಳು ಸುಮಾರು 30 ವರುಷಗಳಿಂದಲೂ ಇದನ್ನು ಆಚರಿಸುತ್ತಿದ್ದಾರೆ. ಅದೂ ಕೂಡ ಎಲ್ಲಾ ಜಾತಿಯ ವಿದ್ಯಾರ್ಥಿಗಳು, ಅಧ್ಯಾಪಕ ಬಂಧುಗಳು ಸೇರಿ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ ಈಗ ಯಾಕೆ ಇದು ವಿವಾದವಾಗುತ್ತಿದೆ. ಕಳೆದೆರಡು ವರ್ಷಗಳಿಂದ ಮಾತ್ರ ಯಾಕೆ ನಿಯಮದಲ್ಲಿ ಇದು ಇದೆಯಾ ಎಂದು ಹುಡುಕುಲಾಗುತ್ತಿದೆ. ಯಾಕೆ ಈ ಹೊಸ ನಡೆ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ‘ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಒಂದು ನಿಯಮಾವಳಿಗಳಿವೆ. ಶಿಕ್ಷಣ ನೀತಿಯಲ್ಲಿ ಅದನ್ನು ಹೇಳಲಾಗಿದೆ. ಅದು ಕುಲಪತಿಗಳಿಗೆ ಗೊತ್ತಿರುವ ವಿಚಾರ. ಇದಕ್ಕೆ ಹೊರಗಡೆಯವರು ಯಾಕೆ ಎಂಟ್ರಿ ಆಗಬೇಕು. ಕುಲಪತಿಗಳಿಗೆ ಸಂಪೂರ್ಣ ಅಧಿಕಾರಿ ಇರುತ್ತದೆ. ಅವರು ಎಲ್ಲವನ್ನೂ ಗಮನಿಸಿ ನಿಯಮ ಮಾಡಿರುತ್ತಾರೆ, ಮಾಡುತ್ತಾರೆ. ಒಂದು ವೇಳೆ ಅದು ತಪ್ಪಿದ್ದರೆ ಸರ್ಕಾರದ ಗಮನಕ್ಕೆ ತರಬೇಕು. ಅದು ಬಿಟ್ಟು ಹೊರಗಿನವರ ಎಂಟ್ರಿ ಆಗಬಾರದು’ ಎಂದರು.

ಇದರೊಂದಿಗೆ ವಿವಿಯ ಇತರ ವಿಚಾರಗಳನ್ನು ಪ್ರಸ್ತಾಪಿಸಿದ ಅವರು ಮೊದಲು ನಮ್ಮ ವಿವಿಗೆ A ಗ್ರೇಡ್ ಇತ್ತು. ಇತ್ತೀಚೆಗೆ ಅದು ಹೋಗಿದೆ. ಸಿಬ್ಬಂದಿಗಳಿಗೆ, ನಿವೃತ್ತ ಅಧ್ಯಾಪಕರುಗಳಿಗೆ ಸಂಬಳ, ಪೆನ್ಶನ್ ಕೊಡದೆ ಮೂರು-ನಾಲ್ಕು ತಿಂಗಳು ಕಳೆದಿದೆ. ಬಂದ ಹಣವನ್ನು ಕಾಮಗಾರಿಗೆ ಬಳಸತ್ತಿದ್ದಾರೆ. ನಮ್ಮ ಮಕ್ಕಳ ರಿಸಲ್ಟ್ ಇನ್ನೂ ಬಂದಿಲ್ಲ ಇದರ ಬಗ್ಗೆ ಯಾಕೆ ಯಾರೂ ಏನು ಮಾತನಾಡುವುದಿಲ್ಲ. ಇಂಟರ್ ನ್ಯಾಶನಲ್ ಲೆವೆಲ್ ಅಲ್ಲಿ ಮಾನ್ಯತೆ ಪಡೆದ ವಿವಿ A ಗ್ರೇಡ್ ಇಂದ B ಗ್ರೇಡ್ ಬರುತ್ತೆ ಅಂದರೆ ಏನು ಅರ್ಥ. ಯಾಕೆ ಯಾರು ಇದರ ಬಗ್ಗೆ ಧ್ವನಿ ಎತ್ತುವುದಿಲ್ಲ. ವಿವಿಗೆ ಯಾವುದು ಮುಖ್ಯ ಈಗ? ಇಷ್ಟು ವರ್ಷ ವಿದ್ಯಾರ್ಥಿಗಳು ಮಾಡಿದ ಆಚರಣೆಯನ್ನು ನೀವೀಗ ಪ್ರಶ್ನೆ ಮಾಡುತ್ತೀರಾ? ಸಾಂವಿದಾನಿವಾಗಿ ಇಷ್ಟು ವರ್ಷದಲ್ಲಿ ಏನು ಪ್ರಶ್ನೆ ಬಂದಿಲ್ಲ’ ಎಂದರು.

ಬಳಿಕ ಮಾತನಾಡಿದ ಅವರು ‘ಇದುವರೆಗೂ ವಿಶ್ವವಿದ್ಯಾಲಯ ಅನುದಾನ ನೀಡಿದ್ದರೆ ಏನಾದರು ಸಮಸ್ಯೆ ಆಗಬೇಕಿತ್ತು. ಸಾಂವಿದಾನಿಕವಾಗಿ ಪ್ರಶ್ನೆಗಳ ಎದುರಾಗುತ್ತಿದ್ದವು. ಆದರೆ ಆಗಿಲ್ಲ. ಹಾಗಿದ್ರೆ ಏನೂ ಸಮಸ್ಯೆ ಇಲ್ಲ. ಇದ್ದರೆ ಕುಲಪತಿಗಳು UGC ನಿಯಮ ನೋಡಿ ಬಗೆ ಹರಿಸುತ್ತಾರೆ. ಹೊರಗಿನವರ ಎಂಟ್ರಿ ಅನಗತ್ಯ. ಹೋಗಲೂ ಬಾರದು. ವಿದ್ಯಾರ್ಥಿಗಳ ಖುಷಿ ಮುಖ್ಯ. ಹೊರಗಿನವರು ರಾಜಕೀಯ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.

You may also like

Leave a Comment