Home » Dakshina Kannada: ರಾತ್ರಿ ಉಂಡು ಮಲಗಿದ ಯುವತಿಗೆ ಹೃದಯಾಘಾತ!!! ಹದಿಹರೆಯದ ಯುವತಿ ಸಾವು

Dakshina Kannada: ರಾತ್ರಿ ಉಂಡು ಮಲಗಿದ ಯುವತಿಗೆ ಹೃದಯಾಘಾತ!!! ಹದಿಹರೆಯದ ಯುವತಿ ಸಾವು

0 comments

ಇತ್ತೀಚೆಗೆ ಯುವ ಜನರಲ್ಲಿ ಹೃದಯಾಘಾತದ ಸಮಸ್ಯೆಗಳು ಕಂಡು ಬರುತ್ತಿರುವ ಘಟನೆ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ‌. ಈತನ್ಮಧ್ಯೆ ಹದಿಹರೆಯದ ಯುವತಿಯೋರ್ವಳು ಮಲಗಿದ್ದಲ್ಲಿಯೇ ಸಾವಿಗೀಡಾದ ಘಟನೆಯೊಂದು ಬುಧವಾರ ನಡೆದಿದೆ.

ಬಿ ಸಿ ರೋಡ್ ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಈ ಯುವತಿಯ ಹೆಸರು ಮಿತ್ರಾ ಶೆಟ್ಟಿ (19). ಈಕೆ ಕಾವಳಪಡೂರು ಗ್ರಾಮದ ಮಧ್ಯಗುತ್ತು ರಾಜೀವ ಶೆಟ್ಟಿ ಮೀನಾ ದಂಪತಿಯ ಪುತ್ರಿ.

ಮೃತ ಯುವತಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜೊತೆ ವಾಸವಿದ್ದರು ಎನ್ನಲಾಗಿದೆ. ಎಂದಿನಂತೆ ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿ ಜೊತೆ ಮಲಗಿದ್ದ ಈಕೆ ಬೆಳಗ್ಗೆ ಎದ್ದೇಳಲೇ ಇಲ್ಲ.

ಗಾಬರಿಗೊಂಡ ಅಮ್ಮ ಮಗಳನ್ನು ಎಚ್ಚರ ಮಾಡಿಸಲು ಪ್ರಯತ್ನ ಪಟ್ಟಿದ್ದು, ಕೊನೆಗೆ ಮೃತ ಹೊಂದಿರುವುದಾಗಿ ತಿಳಿದು ಬಂದಿದೆ.

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಹೃದಯಾಘಾತ ಎಂದು ವೈದ್ಯರು ತಿಳಿಸಿದ್ದಾರೆ.
ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.

You may also like

Leave a Comment