Home » ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸಿದ್ದ ಖಾಸಗಿ ಬಸ್ಸು ಮಾಲೀಕ ಆತ್ಮಹತ್ಯೆ!!

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸಿದ್ದ ಖಾಸಗಿ ಬಸ್ಸು ಮಾಲೀಕ ಆತ್ಮಹತ್ಯೆ!!

0 comments

 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಾ ಜನ ಮನ್ನಣೆಗೆ ಪಾತ್ರವಾಗಿದ್ದ ಖಾಸಗಿ ಬಸ್ಸು ಮಾಲೀಕರೊಬ್ಬರು ಆತ್ಮಹತ್ಯೆಗೆ (Private bus owner suicide) ಶರಣಾದ ಬಗ್ಗೆ ವರದಿಯಾಗಿದೆ.

ಕಳೆದ ಹಲವಾರು ವರ್ಷಗಳಿಂದ ‘ಮಹೇಶ್’ ಹೆಸರಿನ ಖಾಸಗಿ ಬಸ್ಸು ಜಿಲ್ಲೆಯ ಹಲವಾರು ಪ್ರದೇಶಗಳಿಗೆ ನಿತ್ಯ ಸಂಚಾರ ನಡೆಸುತ್ತಿತ್ತು. ಸುಮಾರು 60ಕ್ಕೂ ಮಿಕ್ಕಿ ಬಸ್ಸುಗಳನ್ನು ಹೊಂದಿದ್ದ ಸಂಸ್ಥೆಯು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಿ ಪ್ರೀತಿ,ವಿಶ್ವಾಸ ಗಳಿಸುವುದರೊಂದಿಗೆ ಹಲವು ಯುವಕರಿಗೆ ಉದ್ಯೋಗ ನೀಡಿತ್ತು. ಸದ್ಯ, ಈ ಬಸ್ಸು ಮಾಲೀಕ ಪ್ರಕಾಶ್ ಶೇಖ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕದ್ರಿಯ ತಮ್ಮ ನಿವಾಸದಲ್ಲಿ ಪ್ರಕಾಶ್ ಶೇಖ್ ರವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

You may also like

Leave a Comment