2
Bantwala: ಗುರುವಾರ ಸಂಜೆ ಶಾಲಾ ಬಾಲಕನೋರ್ವ ನೇತ್ರಾವತಿ ನೀರಿನಲ್ಲಿ ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ನಡೆದಿದೆ.
ಅಲ್ಲಿಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ (13) ಮೃತಪಟ್ಟ ಬಾಲಕ.
ಸ್ನೇಹಿತರ ಜೊತೆ ನದಿಯ ಬಳಿ ತೆರಳಿದ್ದ ಬಾಲಕ ಕಾಲು ಜಾರಿ ನೀರಿಗೆ ಬಿದ್ದು ಸಾವಿಗೀಡಾದ ಶಂಕೆ ವ್ಯಕ್ತವಾಗಿದೆ. ಬಾಲಕನನ್ನು ಸ್ಥಳೀಯ ಮುಳುಗು ತಜ್ಞರು ನೀರಿಗೆ ಹಾರಿ ಮೇಲಕ್ಕೆ ಎತ್ತಿ ತಂದರೂ ಅದಾಗಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
