Home » ಪುತ್ತೂರು : ಭಜನೆ ಹಾಗೂ ಭಜಕರ ಕುರಿತು ನಿಂದನಾತ್ಮಕ ಪೋಸ್ಟ್ | ಅರಣ್ಯಾಧಿಕಾರಿ ಸಂಜೀವ ವಿರುದ್ಧ ಪ್ರತಿಭಟನೆಗೆ ಸಿದ್ದತೆ

ಪುತ್ತೂರು : ಭಜನೆ ಹಾಗೂ ಭಜಕರ ಕುರಿತು ನಿಂದನಾತ್ಮಕ ಪೋಸ್ಟ್ | ಅರಣ್ಯಾಧಿಕಾರಿ ಸಂಜೀವ ವಿರುದ್ಧ ಪ್ರತಿಭಟನೆಗೆ ಸಿದ್ದತೆ

by Praveen Chennavara
0 comments

ಪುತ್ತೂರು : ಸರಕಾರದ ಅರಣ್ಯ ಇಲಾಖೆಯಲ್ಲಿ ಇದ್ದುಕೊಂಡು ಭಜನೆ ಮತ್ತು ಭಜಕರ ಬಗ್ಗೆ ನಿಂದನೆಯ ಪೋಸ್ಟ್ ಗಳನ್ನು ತನ್ನ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಗಳಲ್ಲಿ ಹರಿಯಬಿಟ್ಟು ಹಿಂದುಗಳ ಭಾವನೆಗೆ ಧಕ್ಕೆ ತಂದಿರುವ ಉಪ ಅರಣ್ಯ ಅಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ಡಿ.21ರಂದು ಬೆಳಿಗ್ಗೆ ನಡೆಯಲಿದೆ.

ಅರಣ್ಯಾಧಿಕಾರಿ ಸಂಜೀವ ಎಂಬವರು, ಕುಣಿತ ಭಜನೆಯಿಂದ ಮಲಗಿದ ಭಜನೆ ಭೂತಕಾಲದಲ್ಲಿ ಭಜನೆ ಅಂದ್ರೆ ಭಕ್ತಿ ತುಂಬಿದ ಸಮುದ್ರ ಆಗಿತ್ತು.ಆದ್ರೆ ವರ್ತಮಾನ ಕಾಲದಲ್ಲಿ ಭಜನೆ ಅಂದ್ರೆ ಕೆಲವು ಮನುಷ್ಯ ಜಾತಿಯ ನಕಲಿ ಹಿಂದುತ್ವದ ಹಿಂದು ವಾದಿ ಅನ್ನುವ ಪ್ರಾಣಿಗಳಿಗೆ ತಲೆಯಿಂದ ಕಾಲಿನವರೆಗೆ ಕೇಸರಿ ತೊಟ್ಟು ರಾತ್ರಿ ಸಮಯದಲ್ಲಿ ಹದಿಹರೆಯದ ಹೆಣ್ಣು ಗಂಡುಗಳು ಸೇರಿಕೊಂಡು ಮನೆ ಮನೆಯಲ್ಲಿ ಒಂದು ರಾಮ ಹನುಮನ ಕುಣಿತ ಭಜನೆ ಮಾಡಿ ಅಲ್ಲಿಂದ ಹಣ ಅಕ್ಕಿ ತೆಂಗಿನಕಾಯಿ ಸಂಗ್ರಹಿಸುತ್ತಾ ಕೊನೆಯ ಮನೆಯಲ್ಲಿ ಮಾಡಿ ನಂತರ ಗುಡ್ಡದ ಮರದಡಿಯಲ್ಲಿ ಮಲಗಿದ ಭಜನೆ ಮಾಡುವವರೆಗೆ ಬಂದಿದೆ.
ಕಾಪಾಡಲು ರಾಮ ಮತ್ತು ಹನುಮನ ಬಿಲ್ಲು ಬಾಣ ಹಿಡಿದು ಬರಬೇಕು ಎಂದು ಬರೆಯಲಾಗಿತ್ತು.

You may also like

Leave a Comment