Home » ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಬೇಸತ್ತು ತಂದೆ ನೇಣಿಗೆ ಶರಣು!!

ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಬೇಸತ್ತು ತಂದೆ ನೇಣಿಗೆ ಶರಣು!!

0 comments

ಚಿತ್ರದುರ್ಗ:ಯಾವೊಬ್ಬ ತಂದೆಗೆ ತಾನೇ ಮಕ್ಕಳು ಭಾರವಾಗುವುದಿಲ್ಲ. ಎಷ್ಟು ಕಷ್ಟ ಪಟ್ಟರೂ ಸಂತೋಷದಿಂದ ಕಾಪಾಡುವ ಜವಾಬ್ದಾರಿ ತಂದೆ ಹೊರುತ್ತಾರೆ.ಇಂತಹ ತಂದೆ ಒಬ್ಬರು ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳು ಎಂದು ಬೇಸರದಿಂದ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದ ಹೃದಯ ಕಲ್ಲಾಗಿಸುವ ಘಟನೆ ನಡೆದಿದೆ.

ಈ ಘಟನೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಹೊರವಲಯದಲ್ಲಿ ನಡೆದಿದ್ದು,ನಗರಂಗೆರೆ ಗ್ರಾಮದ ನಿವಾಸಿ ದ್ಯಾಮಣ್ಣ (45)ಎಂಬುವವರು ಮೃತ ವ್ಯಕ್ತಿಯಾಗಿದ್ದಾರೆ.

ಮೃತ ದ್ಯಾಮಣ್ಣ ಆಟೋ ಚಾಲಕನಾಗಿದ್ದು, ಮಗಳು ಮನೆಬಿಟ್ಟು ಹೋಗಿದ್ದರಿಂದ ಅವಮಾನಗೊಂಡು ಸಾವಿಗೆ ಶರಣಾದರು ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಮನೆಯಲ್ಲೆ ಆತ್ಮಹತ್ಯೆಗೆ ಯತ್ನಿಸಿದ್ದು, ಆದರೆ ಈ ಸಂದರ್ಭದಲ್ಲಿ ಹೆಂಡತಿ, ಮಕ್ಕಳು ತಡೆದಿದ್ದಾರೆ. ಬಳಿಕ ಆಟೋ ಮೂಲಕ ಊರ ಹೊರವಲಯಕ್ಕೆ ತೆರಳಿರುವ ದ್ಯಾಮಣ್ಣ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment