Home » Crime News : ತಾಯಿ, ಮಗಳ ಜೊತೆ ಅನೈತಿಕ ಸಂಬಂಧ ಬೆಳೆಸಿದ ಯುವಕ! ಯುವತಿಯ ಕನ್ಸಣ್ಣೆಗೆ ಹತ್ಯೆ ನಡೆದೋಯ್ತು!!!

Crime News : ತಾಯಿ, ಮಗಳ ಜೊತೆ ಅನೈತಿಕ ಸಂಬಂಧ ಬೆಳೆಸಿದ ಯುವಕ! ಯುವತಿಯ ಕನ್ಸಣ್ಣೆಗೆ ಹತ್ಯೆ ನಡೆದೋಯ್ತು!!!

0 comments

Gujrath: ಗುಜರಾತ್ ನಲ್ಲಿ ತಾಯಿಯನ್ನು ಮಗಳೇ ಕೊಲೆ ಮಾಡಿಸಿದ ಘಟನೆಯೊಂದು ವರದಿಯಾಗಿದೆ.ಮಹಿಳೆಯೊಬ್ಬರ ಅನುಮಾನಾಸ್ಪದ ಹತ್ಯೆಯ (Crime News) ರಹಸ್ಯವನ್ನು ಭೇದಿಸಿರುವ ಗುಜರಾತ್ ಪೊಲೀಸರು (Gujarath Police) ಆಕೆಯ 17 ವರ್ಷದ ಮಗಳನ್ನು ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ತಾಯಿಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ಲಕ್ಷ್ಮೀ ಭಟ್ ಎಂದು ಗುರುತಿಸಲಾಗಿದ್ದು, ಈಕೆಯ ಪ್ರೇಮಿಯ ಹೆಸರು ಯೋಗೇಶ್ ಜ್ಯೋತಿಯಾನ. ಈತ ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಯೋಗೇಶ್ ಲಕ್ಷ್ಮಿ ಜೊತೆಗೆ ದೈಹಿಕ ಸಂಪರ್ಕ ಹೊಂದಿದ್ದ.ಯೋಗೇಶ್ ತನ್ನ ತಾಯಿ ಜೊತೆ ಲೈಂಗಿಕ ಸಂಬಂಧ ಹೊಂದಿರುವುದು ಆಕೆಯ ಮಗಳಿಗೂ ತಿಳಿದಿತ್ತು. ಈ ನಡುವೆ ಯುವಕ ಮಗಳನ್ನು ಕೂಡ ಪುಸಲಾಯಿಸಿ ಪ್ರೀತಿಯ ನಾಟಕವಾಡಿ ಆಕೆಯ ಜೊತೆಯೂ ಲೈಂಗಿಕ ಸಂಬಂಧ ಶುರು ಮಾಡಿದ್ದ. ಇದನ್ನು ಪ್ರೀತಿಯೆಂದು ನಂಬಿದ ಯುವತಿ ತನ್ನ ತಾಯಿಯ ಜೊತೆ ಸಂಬಂಧ ಹೊಂದಿದ್ದ ಪ್ರೇಮಿ ಯೋಗೇಶ್‌(37)ನನ್ನು ಪ್ರೀತಿಸುತ್ತಿದ್ದಳು.

ಮೃತ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ಯುವಕ, ಆಕೆಯ 17 ವರ್ಷದ ಮಗಳ ಜೊತೆಯಲ್ಲಿಯೂ ಕೂಡ ದೈಹಿಕ ಸಂಬಂಧ ಹೊಂದಿದ್ದ ವಿಚಾರ ತಾಯಿಗೆ ತಿಳಿದು ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ತನ್ನ ಮಗಳ ಸುದ್ದಿಗೆ ಬರದಂತೆ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಕೋಪಗೊಂಡ ಮಗಳು ತಾಯಿಯನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ. ಹೀಗಾಗಿ, ಜುಲೈ 13 ರಂದು ಯೋಗೇಶ್ ಮತ್ತು ಆತನ ಸ್ನೇಹಿತ ನರನ್ ಜೋಗಿ ಎಂಬ ಇಬ್ಬರು ಸೇರಿ ಆ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ.

ಆರೋಪಿಗಳು ಮೃತ ಮಹಿಳೆಯ ಮನೆಯ ಸ್ವಲ್ಪ ದೂರದಲ್ಲಿ ಸಾರ್ವಜನಿಕ ಸಮಾರಂಭಕ್ಕೆ ಆಗಮಿಸಿದ್ದು, ನಂತರ ಹತ್ತಿರದ ಸಮುದ್ರ ವಿಹಾರಕ್ಕೆ ತೆರಳಲು ಪ್ಲಾನ್ ಮಾಡಿ ಮಹಿಳೆಯನ್ನ ಕೂಡ ಕರೆಸಿಕೊಂಡಿದ್ದಾರೆ. ಈ ವೇಳೆ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಶವವನ್ನು ಮರಳಿನ ಮೇಲೆ ಹೂಳಿದ್ದಾರೆ.

ಇದಾದ ಬಳಿಕ ಜುಲೈ ತಿಂಗಳಿನಲ್ಲಿ ಕಚ್‌ನ ಸಮುದ್ರ ತೀರದಲ್ಲಿ ಲಕ್ಷ್ಮಿ ಭಟ್ ಶವ ಪತ್ತೆಯಾಗಿದೆ. ಈ ನಡುವೆ ಈ ಪ್ರದೇಶದಲ್ಲಿ ಯಾವುದೇ ಕಾಣೆಯಾದ ದೂರು ದಾಖಲಾಗದ ಹಿನ್ನೆಲೆ ಪೋಲಿಸರಿಗೆ ಮೃತದೇಹ ಪತ್ತೆ ಹಚ್ಚಲು ಕಷ್ಟಕರವಾಗಿತ್ತು. ನಂತರ ಸ್ಥಳೀಯ ಗುಪ್ತಚರ ಇಲಾಖೆಯ ಸಹಾಯದಿಂದ ಪೊಲೀಸರು ಈ ಕೊಲೆ ಪ್ರಕರಣದ ನಿಗೂಢವನ್ನು ಭೇದಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಮಹಿಳೆಯ 17 ವರ್ಷದ ಮಗಳು ಮತ್ತು ಆಕೆಯ ತಾಯಿಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನೂ ಬಂಧಿಸಿದ್ದಾರೆ.

You may also like

Leave a Comment