5
Davanagere: ಅಮೆರಿಕಾದಲ್ಲಿ ದಾವಣಗೆರೆ(Davanagere) ಮೂಲದ ಕುಟುಂಬವೊಂದು ಸಾವು ಕಂಡಿರುವ ಘಟನೆಯೊಂದು ಶನಿವಾರ ನಡೆದಿದೆ.
ಯೋಗೇಶ್ ಹೊನ್ನಾಳ( 37), ಪ್ರತಿಭಾ ಹೊನ್ನಾಳ (35), ಯಶದ ಹೊನ್ನಾಳ ( 6) ಅನುಮಾನಸ್ಪದಾಗಿ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಸಾವಿಗೀಡಾಗಿದ್ದಾರೆ.
9 ವರ್ಷದ ಹಿಂದೆ ಮದುವೆಯಾಗಿದ್ದ ಇವರು, ಗಂಡ ಹೆಂಡತಿ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಸಾವಿಗೆ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಹಾಗಾಗಿ ಸಾವಿನ ಕುರಿತು ಅನುಮಾನ ಹುಟ್ಟಿದ್ದು, ಸಾವಿನ ನಿಖರ ಕಾರಣ ತಿಳಿಸುವಂತೆ ಕುಟುಂಬಸ್ಥರು ಸರಕಾರಕ್ಕೆ ಮನವಿ ಮಾಡಿದ್ದಾರೆ.
