Home » ಸವಣೂರಿನ ಪ್ರಮೋದ್ ಅವರ ಶವ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಪತ್ತೆ

ಸವಣೂರಿನ ಪ್ರಮೋದ್ ಅವರ ಶವ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಪತ್ತೆ

by Praveen Chennavara
0 comments

ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ನಗರಭೆ ವಾಣಿಜ್ಯ ಸಂಕೀರ್ಣದ ಬಳಿ ಪತ್ತೆಯಾದ ಅಪರಿಚಿತ ವ್ಯಕ್ತಿಯೊಬ್ಬರ ಶವದ ಗುರತು ಪತ್ತೆಯಾಗಿದೆ.

ಸವಣೂರು ಸಮೀಪದ ಶಾಂತಿನಗರ ನಿವಾಸಿ ಪ್ರಮೋದ್ ಮೃತಪಟ್ಟವರು. ಪ್ರಮೋದ್ ಅವರು ವಾರದ ಹಿಂದೆ ಅಸ್ವಸ್ಥಗೊಂಡು ಪುತ್ತೂರು ನೆಲ್ಲಿಕಟ್ಟೆಯ ಕಟ್ಟೆಯಲ್ಲಿ ಮಲಗಿದ್ದರು.

ಇದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಜ.14 ರಂದು ಅವರು ನಗರಸಭೆ ವಾಣಿಜ್ಯ ಸಂಕೀರ್ಣದ ಎದುರು ಕುಸಿದು ಬಿದ್ದಿದ್ದರೆನ್ನಲಾಗಿದೆ. ಬೆಳಿಗ್ಗೆ ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ರಸ್ತೆ ಬದಿ ಬಿದ್ದಿರುವ ವ್ಯಕ್ತಿಯ ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಪೊಲೀಸರು ಬಂದು ಪರಿಶೀಲಿಸಿದಾಗ ಪ್ರಮೋದ್ ಮೃತಪಟ್ಟಿರುವುದು ತಿಳಿದು ಬಂದಿದೆ.

ಪುತ್ತೂರು ನಗರ ಠಾಣಾ ಪೊಲೀಸರಿಂದ ಪರಿಶೀಲಿಸಿದ್ದಾರೆ.

You may also like

Leave a Comment