Home » Deadly Accident: ಲಾರಿ-ಆಟೋ ಭೀಕರ ಅಪಘಾತ; ಆಟೋದಿಂದ ಹಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದ 9 ಮೃತ ದೇಹಗಳು, ಆರು ಮಂದಿ ಗಂಭೀರ

Deadly Accident: ಲಾರಿ-ಆಟೋ ಭೀಕರ ಅಪಘಾತ; ಆಟೋದಿಂದ ಹಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದ 9 ಮೃತ ದೇಹಗಳು, ಆರು ಮಂದಿ ಗಂಭೀರ

1 comment
Deadly Accident

Deadly Accident: ಬಿಹಾರದ ಲಖಿಸರಾಯ್‌ನ ರಾಮಗಢ್‌ ಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಹರೌರಾ ಗ್ರಾಮವೊಂದರಲ್ಲಿ ಭೀಕರ ರಸ್ತೆ ಅಪಘಾತವು ನಡೆದಿದ್ದು, ಈ ಅಪಘಾತದಲ್ಲಿ 9 ಮಂದಿ ಮೃತ ಹೊಂದಿದ್ದು, ಆರಕ್ಕೂ ಹೆಚ್ಚು ಮಂದಿಗೆ ಗಂಭೀರಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: Belthangady: ಆಸಿಡ್‌ ದಾಳಿ ಪ್ರಕರಣ; 29 ವರ್ಷಗಳ ನಂತರ ಆರೋಪಿ ಖುಲಾಸೆಗೊಳಿಸಿದ ನ್ಯಾಯಾಲಯ

ಅಪರಿಚಿತ ವಾಹನವೊಂದು ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋ ಹಾರಿ ಹೋಗಿ ಮೃತದೇಹಗಳನ್ನು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಜೊತೆಗೆ ಗಾಯಗೊಂಡವರು ನರಳುತ್ತಾ ಅಲ್ಲಲ್ಲಿ ಬಿದ್ದಿದ್ದರು.

ಆಟೋದಲ್ಲಿ ಒಟ್ಟು 15 ಜನರಿದ್ದು, 9 ಜನರು ಸಾವನ್ನಪ್ಪಿದ್ದು, ಉಳಿದ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಅಪಘಾತದಲ್ಲಿ ಆಟೋ ಚಾಲಕ ಮನೋಜ್‌ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಮೃತರ ಪೈಕಿ ದಿವಾನ ಕುಮಾರ್‌, ಛೋಟು ಕುಮಾರ್‌, ಅಮಿತ್‌ ಕುಮಾರ್‌ ಮತ್ತು ರಾಮು ಕುಮಾರ್‌ ಎಂಬುವವರನ್ನು ಗುರುತಿಸಲಾಗಿದೆ. ಇವರೆಲ್ಲ ಮುಂಗೇರ್‌ ಜಿಲ್ಲೆಯ ಜಮಾಲ್‌ಪುರದ ನಯಾ ತೋಲಾ ಕೇಶೋಪುರ ನಿವಾಸಿಗಳು ಎಂದು ವರದಿಯಾಗಿದೆ. ಉಳಿದ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.

You may also like

Leave a Comment