4
ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟಿರುವ ದುರ್ಘಟನೆಯೊಂದು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.
ವಾಹನ ಚಲಾಯಿಸುವ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾಗ ಕಾರಲ್ಲಿದ್ದವರು ಮುಂದಾದಾಗ, ಈ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ದಿಯೋಘರ್‌ನ ಶರತ್‌ನಲ್ಲಿರುವ ಅಸನ್ಸ್‌ಲ್ ಸಂಕುಲ್ ಗ್ರಾಮದಿಂದ ಗಿರಿದಿಹ್ ಕಡೆಗೆ ಎಸ್ ಯುವಿ ಕಾರು ಬರುತ್ತಿತ್ತು.
ಸೆಲ್ಫಿ ಹುಚ್ಚಿಗೆ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಬ್ಯಾರೇಜ್ ಗೆ ಬಿದ್ದಿದೆ. ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
