Home » ಸಹೋದ್ಯೋಗಿಗಳ ತಮಾಷೆಗೆ ದುರಂತ ಅಂತ್ಯಕಂಡ ಬಡಪಾಯಿ!! ಮಿತಿಮೀರಿದ ತಮಾಷೆಯಲ್ಲಿ ಗುದಾದ್ವಾರಕ್ಕೆ ಪಂಪ್ ಇಟ್ಟು ಹಾಕಿದ ಗಾಳಿ ಆತನ ಜೀವವನ್ನೇ ಬಲಿಪಡೆಯಿತು

ಸಹೋದ್ಯೋಗಿಗಳ ತಮಾಷೆಗೆ ದುರಂತ ಅಂತ್ಯಕಂಡ ಬಡಪಾಯಿ!! ಮಿತಿಮೀರಿದ ತಮಾಷೆಯಲ್ಲಿ ಗುದಾದ್ವಾರಕ್ಕೆ ಪಂಪ್ ಇಟ್ಟು ಹಾಕಿದ ಗಾಳಿ ಆತನ ಜೀವವನ್ನೇ ಬಲಿಪಡೆಯಿತು

0 comments

ತಮಾಷೆಗಳು ಕೆಲವೊಮ್ಮೆ ತಾರಕಕ್ಕೇರಿ ಅನಾಹುತಗಳಿಗೆ ದಾರಿಮಾಡಿಕೊಟ್ಟ ಅವೆಷ್ಟೋ ಸಾಲುಸಾಲು ಘಟನೆಗಳು ಕಣ್ಣಮುಂದಿವೆ. ಅಂತಹ ಘಟನೆಗಳನ್ನೇ ಹೋಲುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು ಇಲ್ಲಿ ಸಹೋದ್ಯೋಗಿಗಳ ತಮಾಷೆಗೆ ಬಡಪಾಯಿ ಜೀವವೊಂದು ನಿರ್ಧಾಕ್ಷಿಣ್ಯವಾಗಿ ಬಲಿಯಾಗಿದೆ.

ಘಟನೆ ವಿವರ: ಬ್ರೂಕ್ ಜೂಟ್ ಮಿಲ್ ಒಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಎಂಬ ಕೆಲಸಗಾರನೇ ಬಲಿಯಾದ ದುರ್ದೈವಿ. ಈ ಹಿಂದೆ ಹಲವಾರು ಬಾರಿ ಈತನ ಸಹೋದ್ಯೋಗಿಗಳು ತಮಾಷೆಗಾಗಿ ಪೀಡಿಸಿದ್ದು ಅಂದು ಕೂಡಾ ಅದೇ ಮುಂದುವರಿದಿತ್ತು ಎನ್ನಲಾಗಿದೆ. ತಮಾಷೆ ವಿಪರೀತವಾಗಿ ರೆಹೆಮತ್ ನ ಗುದಾದ್ವಾರಕ್ಕೆ ಏರ್ ಪಂಪ್ ಒಂದನ್ನಿಟ್ಟು ಗಾಳಿ ತುಂಬಿಸಿದ್ದರಿಂದ ದೇಹದ ಲಿವರ್ ಸೇರಿದಂತೆ ಕೆಲ ಅಂಗಾಂಗಗಳು ಡ್ಯಾಮೇಜ್ ಆಗಿವೆ. ಘಟನೆಯಿಂದ ಅಸ್ವಸ್ಥರಾದ ರೆಹಮತ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಮನೆಗೆ ಆಧಾರಸ್ಥಂಭವಾಗಿದ್ದ ರೆಹಮತ್ ಮರಣದಿಂದ ಕುಟುಂಬ ತತ್ತರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇತ್ತ ಸಾವಿಗೆ ಕಾರಣರಾದ ಸಹೋದ್ಯೋಗಿಗಳು ನಾಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

You may also like

Leave a Comment