Home » Metro Train: ಮೆಟ್ರೋ ಬಾಗಿಲು ಮುಚ್ಚುವಾಗ ಸೀರೆ ಸಿಕ್ಕಿ ಬಿದ್ದ ಮಹಿಳೆ !! ನಂತರ ಏನಾಯ್ತು ಗೊತ್ತಾ?!

Metro Train: ಮೆಟ್ರೋ ಬಾಗಿಲು ಮುಚ್ಚುವಾಗ ಸೀರೆ ಸಿಕ್ಕಿ ಬಿದ್ದ ಮಹಿಳೆ !! ನಂತರ ಏನಾಯ್ತು ಗೊತ್ತಾ?!

0 comments

Metro Train: ದೆಹಲಿಯ (Delhi) ಇಂದರ್‌ಲೋಕ್ (Inderlok) ಮೆಟ್ರೋ ನಿಲ್ದಾಣದಲ್ಲಿ (Metro Station) ಮೆಟ್ರೋ (Metro) ರೈಲಿನ ಬಾಗಿಲಿಗೆ ಮಹಿಳೆಯೊಬ್ಬರ ಸೀರೆಯ (Saree) ಸೆರಗು ಸಿಲುಕಿಕೊಂಡಿದ್ದರಿಂದ ಮಹಿಳೆ ರೈಲಿನಿಂದ ಎಳೆಯಲ್ಪಟ್ಟು ಮೃತಪಟ್ಟ ಘಟನೆ ವರದಿಯಾಗಿದೆ.

 

ಇಂದರ್‌ಲೋಕ್ ಮೆಟ್ರೋ ನಿಲ್ದಾಣಕ್ಕೆ ಗುರುವಾರ ಮಹಿಳೆ ರೀನಾ (35) ತಲುಪಿ ರೈಲು ಬದಲಾಯಿಸಲು ಮುಂದಾಗಿದ್ದು, ಈ ಸಂದರ್ಭ ಅವರ ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಲುಕಿದೆ. ಇದರಿಂದಾಗಿ ರೀನಾ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ರೀನಾ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಮೃತ ಮಹಿಳೆಯ ಸಂಬಂಧಿ ವಿಕ್ಕಿ, ರೀನಾ ಅವರು ಪಶ್ಚಿಮ ದೆಹಲಿಯ ನಾಂಗ್ಲೋಯ್‌ನಿಂದ ಮೋಹನ್ ನಗರಕ್ಕೆ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ರೀನಾ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸಾಗಿಸಿ ದ್ದರು ಕೂಡ ಶನಿವಾರ ಮೃತಪಟ್ಟಿದ್ದಾರೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತಂತೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಮಾಡುವ ಭರವಸೆಯನ್ನು ದೆಹಲಿ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಲ್ ನೀಡಿದ್ದಾರೆ. ರೀನಾ ಅವರು ಒಬ್ಬ ಮಗ ಮತ್ತು ಮಗಳನ್ನು ಆಗಲಿದ್ದಾರೆ ಎನ್ನಲಾಗಿದೆ.

You may also like

Leave a Comment