Home » Crime News: ವಿದ್ಯಾರ್ಥಿನಿಯರ ವಾಶ್‌ರೂಂ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟ ಸ್ವೀಪರ್!!!‌ ಮುಂದೇನಾಯ್ತು ಗೊತ್ತಾ?

Crime News: ವಿದ್ಯಾರ್ಥಿನಿಯರ ವಾಶ್‌ರೂಂ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟ ಸ್ವೀಪರ್!!!‌ ಮುಂದೇನಾಯ್ತು ಗೊತ್ತಾ?

by Mallika
1 comment
Delhi

Delhi: ದೆಹಲಿಯ( Delhi)ಐಐಟಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬರು ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವೀಪರ್ ನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏಜೆನ್ಸಿ ಮೂಲಕ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕ ದೆಹಲಿ ಐಐಟಿಯಲ್ಲಿ ಸ್ವೀಪರ್‌ ಆಗಿ ಕೆಲಸ ಮಾಡುತ್ತಿದ್ದ.

ಈ ಯುವಕ ತನ್ನ ಮೊಬೈಲ್ ಫೋನ್ ಅನ್ನು ಲೇಡಿ ವಾಶ್ ರೂಂನಲ್ಲಿಟ್ಟು, ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 7 ರಂದು, ವಿದ್ಯಾರ್ಥಿಯ ದೂರಿನ ಮೇರೆಗೆ, ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಕಿಶನ್‌ಗಢ ಪೊಲೀಸ್ ಠಾಣೆಯಲ್ಲಿ ಸ್ವೀಪರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 6 ರಂದು ವಿಷಯ ಗಮನಕ್ಕೆ ಬಂದಿದ್ದು, ಅದರ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರಿಗೆ ದೂರು ನೀಡಲಾಯಿತು ಮತ್ತು ಆರೋಪಿ ಸ್ವೀಪರ್ ಅನ್ನು ಬಂಧಿಸಲಾಯಿತು.

ಇದನ್ನೂ ಓದಿ: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನೀಡಿದ ಮಸೀದಿ ಜಾಗ ವಾಪಸ್‌ಗೆ ಮುಸ್ಲಿಮರ ಒತ್ತಾಯ!!! ಮತ್ತೊಂದು ವಿವಾದ!

You may also like

Leave a Comment