Home » Dharavada: ಲೋಕಸಭಾ ಟಿಕೆಟ್ ಕುರಿತು ಸಾರ್ವಜನಿಕವಾಗೇ ಜಗದೀಶ್ ಶೆಟ್ಟರ್ ಗೆ ಮುಜುಗರ ಉಂಟುಮಾಡಿದ ಸಿಎಂ ಸಿದ್ದರಾಮಯ್ಯ !!

Dharavada: ಲೋಕಸಭಾ ಟಿಕೆಟ್ ಕುರಿತು ಸಾರ್ವಜನಿಕವಾಗೇ ಜಗದೀಶ್ ಶೆಟ್ಟರ್ ಗೆ ಮುಜುಗರ ಉಂಟುಮಾಡಿದ ಸಿಎಂ ಸಿದ್ದರಾಮಯ್ಯ !!

0 comments
Dharavada

Dharavada: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಕಾರಣ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ ವಿಚಾರ ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಟಿಕೆಟ್ ನೀಡಿದರೂ ಕೂಡ ಸೋತು ಕಂಗಾಲಾದ ಶೆಟ್ಟರ್ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸುದ್ದಿ ಗುಲ್ಲೆಬ್ಬಿದೆ. ಸದ್ಯ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ಸಾರ್ವಜನಿಕವಾಗೇ ಜಗದೀಶ್ ಶೆಟ್ಟರ್(Jagadish Shetter)ಗೆ ಮುಜುಗರ ಉಂಟುಮಾಡಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ.

 

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಮಾಧ್ಯಮದವರು ಮುಖ್ಯಮಂತ್ರಿ ಸಿದ್ದರಾಮಯ್ಯ(C M Siddaramaiah)ಅವರ ಬಳಿ ಲೋಕಸಭಾ ಚುನಾವಣೆ ಕುರಿತು ಪ್ರಶ್ನೆಗಳನ್ನು ಕೇಳುತ್ತಾರೆ. ಪಕ್ಕದಲ್ಲಿ ಜಗದೀಶ್ ಶೆಟ್ಟರ್ ಕೂಡ ಇರುತ್ತಾರೆ. ಆಗ ಧಾರವಾಡ(Dharavada) ಲೋಕಸಭಾ ಟಿಕೆಟ್ ಯಾರಿಗೆ ಸಿಗುತ್ತೆ, ಶೆಟ್ಟರ್ ಅವರಿಗೆ ನೀಡುತ್ತೀರಾ? ಎಂದು ಮಾಧ್ಯಮದವರು ಕೇಳುತ್ತಾರೆ. ಆಗ ಮುಖ್ಯಮಂತ್ರಿಗಳು ತಡವರಿಸುತ್ತಾ ನೋಡೋಣ ಯಾರಿಗೆ ಕೊಡೋದು ಅಂತ, ಶೆಟ್ಟರ್ ಕೂಡ ಆಕಾಂಕ್ಷಿ(aspirant) ಇದ್ದಾರೆ ಎಂದು ಹೇಳುತ್ತಾರೆ. ಆಗ ಜಗದೀಶ್ ಶೆಟ್ಟರ್ ಅವರು ಸುಮ್ಮನೆ ನಿಂತಿದ್ದವರು ಮುಜುಗುರಕ್ಕೊಳಗಾಗಿ ಇಲ್ರೀ ನಾನು ಆಕಾಂಕ್ಷಿ ಅಲ್ಲ, ನಾನು ಯಾವುದೇ ಕಾರಣಕ್ಕೂ ಆಕಾಂಕ್ಷಿ ಅಲ್ಲ ಎಂದು ಪದೇ ಪದೇ ಕೂಗಿ ಹೇಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಕೂಡಲೇ ಎಲ್ಲ ಅರ್ಥವಾಗಿ ಮುಖ ಆ ಕಡೆ ತಿರುಗಿಸಿ ನಗಲು ಶುರುಮಾಡುತ್ತಾರೆ.

ಇದನ್ನು ಓದಿ: Rama mandir Inauguration: ಉದ್ಘಾಟನೆ ದಿನ ಈ 5 ಮಂದಿಗೆ ಮಾತ್ರ ರಾಮ ಮಂದಿರದ ಗರ್ಭ ಗುಡಿಯೊಳಗೆ ಪ್ರವೇಶ !!

ಒಟ್ಟಿನಲ್ಲಿ ನಾನು ಯಾವುದೇ ಆಸೆ, ಆಧಿಕಾರದ ದುರಾಸೆ ಇಟ್ಟುಕೊಂಡು ಕಾಂಗ್ರೆಸ್ ಸೇರಿಲ್ಲ ಎಂದು ಹೇಳುತ್ತಿದ್ದ ಜಗದೀಶ್ ಶೆಟ್ಟರ್ ಅವರಿಗೆ ಸಿದ್ದರಾಮಯ್ಯ ಅವರು ಪಬ್ಲಿಕ್ ಆಗೇ ಮುಜುಗರ ಮಾಡಿದ್ದಂತು ಸತ್ಯ. ಇದೀಗ ಈ ವಿಡಿಯೋ ಇಟ್ಟುಕೊಂಡು ಅನೇಕ ಟ್ರೋಲ್ ಪೇಜ್ ಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿವೆ. ಹೋ ಶೆಟ್ಟರ್ ಅವರೆ ಕಾಂಗ್ರೆಸ್ ಸೇರಿದ್ದು ಇದೇ ವಿಷ್ಯಕ್ಕಾ, ಹೀಗಾ ವಿಷ್ಯ ಎಂದು ಶೆಟ್ಟರ್ ಕಾಲೆಳೆಯುತ್ತಿವೆ.

 

https://www.instagram.com/reel/C1E0qN6v80T/?igsh=MTUxZTRyaDNldGp6eQ==

You may also like

Leave a Comment