Home » ನಾಯಿಯೊಂದು ಅಡ್ಡ ಬಂದ ಕಾರಣ, ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು!

ನಾಯಿಯೊಂದು ಅಡ್ಡ ಬಂದ ಕಾರಣ, ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು!

by Mallika
0 comments

ನಾಯಿಯೊಂದು ತರಬೇತಿ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ದಿಢೀರನೆ ನುಗ್ಗಿದ್ದು, ದಿಗ್ಭ್ರಮೆ ಉಂಟು ಮಾಡಿದ ಘಟನೆಯೊಂದು ನಿನ್ನೆ ರಾತ್ರಿ ಜಕ್ಕೂರು ಏರೋಡೋಮ್ ನಲ್ಲಿ ನಡೆದಿದೆ.

ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ ಸೆಸ್ನಾ-185 ಆಕಾಶಕ್ಕೆ ಹಾರಲು ಕೆಲ ಕ್ಷಣಗಳಷ್ಟೇ ಬಾಕಿ ಇತ್ತು, ಅಷ್ಟರಲ್ಲಿ ನಾಯಿಯೊಂದು ಅಡ್ಡ ಬಂದಿದೆ.

ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಮಹಿಳಾ ಪೈಲೆಟ್‌ಗೆ ಗಾಯವಾಗಿದೆ. ಇನ್ನು ಈ ವಿಮಾನದಲ್ಲಿದ್ದ ಮತ್ತಿಬ್ಬರು ಪೈಲೆಟ್‌ಗೆ ಯಾವುದೇ ಗಾಯಗಳಾಗಿಲ್ಲ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

You may also like

Leave a Comment