Home » ಆಸ್ಪತ್ರೆಯ ವಾರ್ಡ್ ನಲ್ಲಿದ್ದ ಎರಡು ದಿನದ ಮಗುವನ್ನು ಕಚ್ಚಿ ತಿಂದ ನಾಯಿ!

ಆಸ್ಪತ್ರೆಯ ವಾರ್ಡ್ ನಲ್ಲಿದ್ದ ಎರಡು ದಿನದ ಮಗುವನ್ನು ಕಚ್ಚಿ ತಿಂದ ನಾಯಿ!

0 comments

ಇತ್ತೀಚೆಗೆ ಬೀದಿ ನಾಯಿಗಳ ಕಾಟ ಹೆಚ್ಚುತ್ತಿದ್ದು, ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಕಚ್ಚುವಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿದೆ. ಆದರೆ ಇದೀಗ ವಿಚಿತ್ರ ಎಂಬಂತೆ ಆಸ್ಪತ್ರೆಯಲ್ಲಿದ್ದ ಪುಟ್ಟ ಪಾಪುವನ್ನು ನಾಯಿ ಕಚ್ಚಿ ಕೊಂದ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ಹೌದು ಖಾಸಗಿ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಮಲಗಿಸಿದ್ದ ಎರಡು ದಿನದ ಪುಟ್ಟ ಪಾಪುವನ್ನು ನಾಯಿ ಕಚ್ಚಿಕೊಂಡು ಹೋಗಿ, ಅದನ್ನು ಕೊಂದು ತಿಂದ ಭಯಾನಕ ಘಟನೆ ನಡೆದಿದೆ.

ಮಗುವಿನ ಕುಟುಂಬಸ್ಥರು ಶಿಶು 2:15ರ ಸುಮಾರಿಗೆ ಕಾಣುತ್ತಿಲ್ಲ ಎಂದು ಆರೋಪಿಸಿದ್ದರು. ಇದಾದ ಬಳಿಕ ಪಕ್ಕದ ಪ್ಲಾಂಟ್‌ನಲ್ಲಿ ನಾಯಿಯ ಬಾಯಿಯಲ್ಲಿ ಮಗು ಇರುವುದು ಕಂಡು ಬಂದಿದ್ದು, ನಾಯಿ ಬಲವಾಗಿ ಕಚ್ಚಿದ್ದರಿಂದ ಮಗು ಸತ್ತು ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

You may also like

Leave a Comment