Home latest Udupi: ಉಡುಪಿ ಕೃಷ್ಣನ ದರ್ಶನಕ್ಕೆ ಬರುವವರಿಗೆ ವಸ್ತ್ರ ಸಂಹಿತೆ ಜಾರಿ

Udupi: ಉಡುಪಿ ಕೃಷ್ಣನ ದರ್ಶನಕ್ಕೆ ಬರುವವರಿಗೆ ವಸ್ತ್ರ ಸಂಹಿತೆ ಜಾರಿ

 

Udupi: ಉಡುಪಿಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಆರಂಭವಾಗುತ್ತಿದ್ದಂತೆ ಶ್ರೀಗಳು ಉಡುಪಿಯ ಕೃಷ್ಣ ದರ್ಶನಕ್ಕೆ ಬರುವವರಿಗೆ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿದ್ದಾರೆ.

ಹೌದು, ಶ್ರೀ ವೇದವರ್ಧನ ಶ್ರೀಪಾದರು ಪರ್ಯಾಯ ಆರಂಭಿಸಿದ್ದು, ಈ ಬೆನ್ನಲ್ಲೇ ಅವರು ಶ್ರೀ ಕೃಷ್ಣನ ದರ್ಶನದ ವೇಳೆ ಪುರುಷರು ಮತ್ತು ಸ್ತ್ರೀಯರು ತುಂಡುಡುಗೆ, ಬರ್ಮುಡಾ, ಶಾರ್ಟ್ ಡ್ರೆಸ್ ಧರಿಸಿ ಬರಬಾರದು, ಪುರುಷರು ದರ್ಶನದ ವೇಳೆ ಶರ್ಟ್ ಬನಿಯನ್ ತೆಗೆದು ಬರಬೇಕು ಎಂದು, ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ಈ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ತಿಳಿಸಿದ್ದಾರೆ. ಶಿರೂರು ಮಠದ ದಿವಾನರಾದ ಉದಯಕುಮಾರ ಸರಳತ್ತಾಯ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಇದಕ್ಕೂ ಮೊದಲು, ಈ ಪದ್ಧತಿ ಮೊದಲು ಬೆಳಿಗ್ಗೆ 11 ಗಂಟೆಯ ಮುಂಜಾನೆ ಮಹಾಪೂಜೆಗೆ ಹಾಜರಾಗುವ ಭಕ್ತರಿಗೆ ಮಾತ್ರ ಅನ್ವಯಿಸುತ್ತಿತ್ತು . ಆದರೆ ಹೊಸ ನಿಯಮದ ಅಡಿಯಲ್ಲಿ, ಈಗ ದಿನವಿಡೀ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಐತಿಹಾಸಿಕ ಶ್ರೀ ಕೃಷ್ಣ ಮಠದ ಪಾವಿತ್ರ್ಯ, ಶಿಸ್ತು ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.