Home » ಬಂಡೀಪುರ ಕಾಡಿನಲ್ಲಿ ನಡೆದ ಅಪರೂಪದ ಘಟನೆ; ಅವಳಿ ಆನೆಗಳ ಆಗಮನ

ಬಂಡೀಪುರ ಕಾಡಿನಲ್ಲಿ ನಡೆದ ಅಪರೂಪದ ಘಟನೆ; ಅವಳಿ ಆನೆಗಳ ಆಗಮನ

0 comments

ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ತೀರಾ ಅಪರೂಪ ಘಟನೆ ಬಂಡೀಪುರ ಕಾಡಲ್ಲಿ ನಡೆದಿದೆ. ಆನೆಗಳಲ್ಲಿ ಅವಳಿ ಮರಿಗಳಾಗುವುದು ತೀರಾ ಅಪರೂಪವೇ ಆಗಿರುತ್ತದೆ. ಇದೇ ಮೊದಲ ಬಾರಿಗೆ ಬಂಡೀಪುರದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಮೂರ್ಕೆರೆ ದಾರಿ ಎಂಬಲ್ಲಿ ನೀರಿನ ಹೊಂಡ ಸಮೀಪ ಎರಡು ಮರಿಗಳೊಂದಿಗೆ ಆನೆ ಕಾಣಸಿಕೊಳ್ಳುವ ಮೂಲಕ ಅವಳಿ ಮರಿ ಜನನದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಸಸ್ತನಿ ಗುಂಪಿಗೆ ಸೇರುವ ಆನೆ ಬರೋಬ್ಬರಿ ಹತ್ತಿರ ಹತ್ತಿರ ಎರಡು ವರ್ಷ ಗರ್ಭ ಧರಿಸಿರುತ್ತದೆ. ಆನೆ ಭಾರಿ ಗಾತ್ರದ ಪ್ರಾಣಿಯಾಗಿರುವುದರಿಂದ ಉಳಿದ ಸಸ್ತನಿಗಳಾದ ಹುಲಿ, ಚಿರತೆಯಂತೆ 4-5 ಮರಿಗಳಿಗೆ ಜನ್ಮ ನೀಡದೇ ಒಂದೇ ಮರಿಗೆ ಮಾತ್ರ ಜನ್ಮ ನೀಡುತ್ತದೆ‌ .‌ಆದರೆ ಈ ಆನೆ ಅವಳಿ ಆನೆಮರಿಗಳಿಗೆ ಜನ್ಮನೀಡಿರುವುದು ವಿಶೇಷ. ತಾಯಿ ಮಗು ಆರೋಗ್ಯವಾಗಿದೆ.

You may also like

Leave a Comment